Wednesday, September 2, 2026
Homeಕ್ರೈಮ್ಬೆಂಗಳೂರಲ್ಲಿ ಅವಳಿ ಹೆಣ್ಣುಮಕ್ಕಳ ಕತ್ತು ಹಿಸುಕಿ ಕೊಂದ ಕ್ರೂರಿ ತಾಯಿ!

ಬೆಂಗಳೂರಲ್ಲಿ ಅವಳಿ ಹೆಣ್ಣುಮಕ್ಕಳ ಕತ್ತು ಹಿಸುಕಿ ಕೊಂದ ಕ್ರೂರಿ ತಾಯಿ!

Telegram Group
Join Now

ಬೆಂಗಳೂರು: ತಾಯಿಯಿಂದಲೇ ಅವಳಿ ಹೆಣ್ಣುಮಕ್ಕಳ  ಕಗ್ಗೊಲೆಯಾಗಿರುವ ಘಟನೆ ಬೆಂಗಳೂರಿನ  ತಲಘಟ್ಟಪುರದಲ್ಲಿ ನಡೆದಿದೆ.

ಉಮಾದೇವಿ ಎಂಬಾಕೆಯಿಂದ ಈ ಕೃತ್ಯ ನಡೆದಿದೆ. ಖಾಸಗಿತನಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ತನ್ನ ಎರಡು ಅವಳಿ ಹೆಣ್ಣುಮಕ್ಕಳನ್ನು ತಾಯಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 40 ವರ್ಷಗಳ ಬಳಿಕ ಮಹಿಳೆಗೆ ಐವಿಎಫ್ ಮೂಲಕ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದರು. ಕಳೆದ ಮೇ ತಿಂಗಳಲ್ಲಿ ಮಹಿಳೆ ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು.

ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments