Saturday, September 19, 2026
Homeಜಿಲ್ಲಾಸುದ್ದಿದಸರಾ ಕ್ರೀಡಾಕೂಟಕ್ಕೆ ಹಲವು ವರ್ಷಗಳ ಇತಿಹಾಸವಿದ್ದು, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲಾಗಿದೆ : ರಾಘವೇಂದ್ರ ಕೆಸವಳಲು

ದಸರಾ ಕ್ರೀಡಾಕೂಟಕ್ಕೆ ಹಲವು ವರ್ಷಗಳ ಇತಿಹಾಸವಿದ್ದು, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲಾಗಿದೆ : ರಾಘವೇಂದ್ರ ಕೆಸವಳಲು

Telegram Group
Join Now

ಮೂಡಿಗೆರೆ : ಸ್ಪರ್ಧಾ ಮನೋಭಾವದಿಂದ ಕ್ರೀಡಾಪಟುಗಳು ಆಟೋಟಗಳಲ್ಲಿ ಭಾಗವಹಿಸಬೇಕು. ತೀರ್ಪುಗಾರರ ನಿರ್ಣಯಗಳಿಗೆ ಬದ್ಧರಾಗಿರಬೇಕು ಎಂದು ಪತ್ರಕರ್ತ ರಾಘವೇಂದ್ರ ಕೆಸವಳಲು ಹೇಳಿದರು.

ಹೊಯ್ಸಳ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಮಗಳುರು, ತಾಲ್ಲೂಕು ಪಂಚಾಯಿತಿ ಮೂಡಿಗೆರೆ ಹಾಗೂ ಕ್ರಿಯೇಟಿವ್ ಮೈಂಡ್ಸ್ ಯೂತ್ ಅಸೋಸಿಯೇಷನ್ ಮೂಡಿಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು

ದಸರಾ ಕ್ರೀಡಾಕೂಟಕ್ಕೆ ಹಲವು ವರ್ಷಗಳ ಇತಿಹಾಸವಿದ್ದು, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲಾಗಿದೆ. ಈ ಭಾಗದ ಕ್ರೀಡಾಪಟುಗಳು ಮೈಸೂರು ದಸರಾದಲ್ಲೂ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು, ಪ್ರಯತ್ನಿಸಿದರೆ ಅವಕಾಶ ಪಡೆಯಬಹುದಾಗಿದೆ, ಕಳೆದ ಹನ್ನೆರಡು ವರ್ಷಗಳಿದಂಲೂ ಕ್ರಿಯೇಟೀವ್ ಮೈಂಡ್ಸ್ ಯೂತ್ ಅಸೋಸಿಯೇಷನ್ ಕ್ರೀಡಾಕೂಟಗಳಲ್ಲಿ ತೊಡಗಿಕೊಂಡು ಮಾಡಿಕೊಂಡು ಬರುತ್ತಿದ್ದು ಅಧ್ಯಕ್ಚ ಮನೋಜ್ ಛತ್ರ ಮೈದಾನ ಮತ್ತು ಸದಸ್ಯರುಗಳು ಶ್ರಮವಹಿಸುತಿತರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಮೂಡಿಗೆರೆ ಹೊಯ್ಸಳ ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಇದೆ. ಕ್ರೀಡಾಪಟುಗಳಿಗೆ ಬಟ್ಟೆಬದಲಾಯಿಸಲು ರೂಮಿನ ವ್ಯವಸ್ಥೆ ಇಲ್ಲಾ. ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಬಸ್ ನಿಲ್ದಾಣದ ಟಾಯ್ಲೆಟ್ ನೀರು ಮೈದಾನಕ್ಕೆ ಬರುತಿದ್ದು ಕ್ರೀಡಾ ಪಟುಗಳು ಕ್ರೀಡೆ ಆಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅವ್ಯವಸ್ಥೆಯ ಬಗ್ಗೆ ಸ್ಥಳಿಯ ಶಾಸಕರಾದ ನಯನಾ ಮೋಟಮ್ಮ ಜೊತೆಗೆ ಮಾತನಾಡಿ ಅವಯವಸ್ಥೆಯನ್ನ ಸರಿ ಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು

ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೆ.ಎ.ರವಿ ಕುನ್ನಳ್ಳಿ ಮಾತನಾಡಿ. ದಸರಾ ಕ್ರೀಡಾಕೂಟ ಈ ಸಾಲಿನಲ್ಲಿ ಸರಳ ಕ್ರೀಡಾಕೂಟವಾಗಿ ನಡೆಯುತ್ತಿದ್ದರು, ಗ್ರಾಮಾಂತರ ಪ್ರದೇಶದ ಕ್ರೀಡಾಕೂಟಗಳು ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿ ಯಾಗುವುದು. ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ. ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಳ್ಳಲು ಕ್ರೀಡೆ ಅನುಕೂಲ ವಾಗುತ್ತವೆ ಎಂದರು.

ಕಸಾಪ ಅಧ್ಯಕ್ಷ ಲಕ್ಷ್ಮಣಗೌಡ ಮಾತನಾಡಿ. ಕ್ರೀಡೆಯಿಂದ ಆರೋಗ್ಯವಾಗಿರು ಸಾಧ್ಯ, ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ದೊರೆಯಬೇಕು, ಪಟ್ಟಣದ ಡಾ.ಪಿ.ಎ.ಅಡ್ಯಂತಾಯ ರಂಗ ಮಂದಿರದ ಪಕ್ಕದಲ್ಲೇ ಇರುವ ಬಾಲ್ ಬ್ಯಾಂಡ್ಮಿಟನ್ ಕ್ರೀಡಾಂಗಣವಿದ್ದು ಯುವಕರು ಮತ್ತು ವಯಸ್ಸಾದವರೂ ದಿನಂ ಪ್ರತಿ ಬಾಲ್ ಬ್ಯಾಂಡ್ಮಿಟನ್ ಆಡುತ್ತಿದ್ದೇವೆ. ಕ್ರೀಡೆ ಬರಿ ಒಂದು ದಿನಕ್ಕೆ ಸ್ಥಿಮಿತವಾಗಿರದೆ ಜೀವನ ದುದ್ದಕ್ಕೂ ಅಳವಡಿಸಿಕೊಂಡಲ್ಲಿ ಮಾನಸಿಕ ಮತ್ತು ಆರೋಗ್ಯದಿಂದ ಇರಲು ಸಾಧ್ಯ ಎಂದರು.

ಕ್ರಿಯೇಟಿವ್ ಮೈಂಡ್ಸ್ ಯೂತ್ ಅಧ್ಯಕ್ಷ ಮನೋಜ್ ಛತ್ರ ಮೈದಾನ ಅವರು ಸ್ವಾಗತ ಬಾಷಣ ಮಾಡಿ ಕಳೆದ ೧೨ ವರ್ಷಗಳಿಂದಲೂ ನಮ್ಮ ಯೂತ್ ಅಸೋಸಿಯನ್ ಸದಸ್ಯರುಗಳು ಕ್ರೀಡೆಗೆ ಸಹಕರಿಸುತ್ತಿದ್ದು ಮುಂದಿನ ದಿನಗಳಲ್ಲೂ ತಮ್ಮ ಸಹಕಾರ ವಿರುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ಮ್ನ ವಹಿಸಿದ್ದ ಶಿಕ್ಷಣ ಇಲಾಖೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಲವೀನ ಸಿಲ್ವಿಯ ಲೋಬೋ ಕ್ರೀಡಾಕೂಟವನ್ನ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಜಿಲ್ಲಾ ವಾಲಿಬಾಲ್ ತರಬೇತುದಾರರು ಯುವ ಸಬಲಿಕರಣ ಮತ್ತು ಕ್ರೀಡಾಇಲಾಕೆಯ ಸಿ.ಎಸ್.ವಿನುತ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಂಜಾ, ಜೆಎಸ್ ಶಾಲೆಯ ಅಧ್ಯಕ್ಷ ಮೊಹಮ್ಮದ್ ಇಮ್ರಾನ್, ಸಚೇತನಾ ಯುವ ಸಂಘದ ಅಧ್ಯಕ್ಷ ರವಿರಾಝ್ ಅರಸ್, ಶಶಾಂಕ್ ಸಾಲೀಯಾನ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!