ಮೂಡಿಗೆರೆ: ಭಾರತೀಯ ನೆರಳು ಮಿಶ್ರಿತ ಸ್ವಾದಿಷ್ಟ ಕಾಫಿಯನ್ನು ಇಂಡಿಕಾಪ್ ಹೆಸರಲ್ಲಿ ಜಾಗತಿಕ ಬ್ರಾಂಡ್ ಮಾಡುವ ತಯಾರಿ ನಡೆಯುತ್ತಿದೆ ಎಂದು ಕಾಫಿ ಬೋರ್ಡ್ ಸಿಇಓ ಕೂರ್ಮರಾವ್ ತಿಳಿಸಿದರು
ಅವರು ಇಲ್ಲಿನ ಬೆಳೆಗಾರರ ಸಂಘವನ್ನು ಉದ್ದೇಶಿಸಿ ಮಾತನಾಡಿ. ಭಾರತೀಯ ಕಾಫಿ ನೆರಳು ಮಿಶ್ರಿತ ಪ್ರದೇಶದಲ್ಲಿ ಬೆಳೆಯುವುದರಿಂದ ಮತ್ತು ಭೂಮಿಯ ಲಕ್ಷಣದಿಂದ ಅತ್ಯುತ್ತಮ ಗ್ರೇಡ್ ಬಂದಿದ್ದು. ಕಾಪಿ ಪ್ರಿಯರಿಗೆ ಸ್ವಾದಿಷ್ಟವಾಗಿದ್ದು. ಜಾಗತಿಕವಾಗಿ ನಮ್ಮದೇ ವಿಶೇಷ ಬ್ರಾಂಡ್ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ಕಾರಣದಿಂದ ಇಂಡಿಕಾಪ್ ಹೆಸರಲ್ಲಿ ಬ್ರಾಂಡ್ ಮಾಡಲು ತಯಾರಿಗಳು ನಡೆಯುತ್ತಿದೆ. ಕಾಫಿ ಬೆಳೆಗಾರರಿಗೆ ಬಜೆಟ್ ಗೆ ತಕ್ಕಂತೆ 5 ವರ್ಷದ ಯೋಜನೆಯಲ್ಲಿ ವಿವಿಧ ಸಲಕರಣೆಗಳು. ನಾಟಿ. ಮರುನಾಟಿ. ಒಣಗಿಸಲು ಇತರೆ
ಮೂಲಭೂತ ಸೌಕರ್ಯಗಳಿಗೆ ಸಬ್ಸಿಡಿ ನೀಡುವ ಪ್ರಕ್ರಿಯೆಗಳಿದ್ದು. ಮಾರುಕಟ್ಟೆಯಲ್ಲಿ ಭಿನ್ನ-ಭಿನ್ನ ಕಾಫಿಯ ವರ್ಗಿಕರಣ ಸೇರಿದಂತೆ ಹಲವು ಸಲಹೆಗಳನ್ನು ಬೆಳೆಗಾರರಿಂದ ತೆಗೆದುಕೊಂಡು ಕಾಫಿ ನವ ಉದ್ಯಮಕ್ಕೆ ನಾಂದಿ ಹಾಡುವ ಗುರಿ ಹೊಂದಲಾಗಿದೆ,
ನ್ಯೆಜ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆಯಲ್ಲಿ ತೊಂದರೆಯಾಗುತ್ತಿದೆ ಈ ಕಾರಣದಿಂದ ಒನ್ ಟ್ಯೆಮ್ ಸೆಟಲ್ ಮೆಂಟಲ್ ತರುತ್ತಿದ್ದೇವೆ. ಕಾಯ್ದೆ ರದ್ದಿಗು ಪ್ರಯತ್ನವಾಗುತ್ತಿದೆ ಎಂದರು.
ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ. ಜಪಾನ್ ಗೆ ನಮ್ಮ ಕಾಫಿ ಬೆಳಗಾರರ ಒಂದು ಎಪ್ ಬಿಎ ಕಂಪನಿ ನೇರವಾಗಿ ತೆರಳಿ ಬಳಕೆದಾರರನ್ನು ತಲುಪುತ್ತಿದೆ ಇದು ಎಲ್ಲೆಡೆ ಆಗಬೇಕು. ವಿಷೇಷ ಕಾಪಿ ಬೆಳೆಯಲು. ಸಂಸ್ಕರಿಸಲು ಮಂಡಳಿ ವತಿಯಿಂದ ಬೆಳೆಗಾರರಿಗೆ ತರಬೇತಿ ನೀಡಲಾಗುವುದು. ಪ್ರಸ್ತುತ ವರ್ಷ ನಮ್ಮಲ್ಲಿ ಐತಿಹಾಸಿಕ ಬೆಳೆ ಹೆಚ್ಚಳವಾಗಲಿದೆ. ಕಾಪಿ ಮಂಡಳಿ ಅರಿವಿಲ್ಲದೆ
ಬ್ರೆಸಿಲ್ ಸೀಡ್ಸ್ ಅಂತಾ 120 ರೂಗೆ ಸಸಿ ಮಾರಾಟ ಮಾಡುತ್ತಿದ್ದು. ಇಲ್ಲಿ ಯಾವುದೆ ಟ್ರಾಯಲ್ ಇಲ್ಲದೆ ಬೆಳೆದಲ್ಲಿ ಅಲ್ಲಿನ ಕಾಯಿಲೆ ವ್ಯೆರಸ್ ಬರುವ ಸಾದ್ಯತೆ ಇದ್ದು. ಬೇರೆ ದೇಶದ ಸೀಡ್ ಸಸಿಗಳನ್ನು ಜಾಹಿರಾತು ಮಾಡಿ ಮಾರಟ ಮಾಡುವುದನ್ನು ಕಾಪಿ ಮಂಡಲಿ ನಿಷೇದಿಸಿದೆ.. ಎಂದರು
ಈ ಸಭೆಯಲ್ಲಿ ಭಾಗವಹಿಸಿದ ಬೆಳೆಗಾರರು ಕಾಪಿ ಬೆಳೆಗಾರರಿಗೆ ಸಬ್ಸೀಡಿ ಹೆಚ್ಚಿಸಿ. ಡ್ರೈಯರ್ ಗೆ ಸಬ್ಸೀಡಿ ಇಲ್ಲಾ. ಸರ್ಪೇಸಿ ಸಮಸ್ಸೆ ಪ್ರಮುಖವಾಗಿದೆ. ಅದನ್ನ ತೆಗೆಯಲು ಕ್ರಮ ತೆಗೆದುಕೊಳ್ಳಿ. ನಾವು ನೆರಳಲ್ಲಿ ಕಾಪಿ ಬೆಳೆಯುತ್ತೆವೆ ಇದನ್ನ ಬ್ರಾಂಡ್ ಮಾಡಿ. ಕಾಫಿ ಉದ್ಯಮಕ್ಕೆ ಕಸ್ತೂರಿ ರಂಗನ್ ವರಧಿ ಮಾರಕವಾಗಲಿದೆ. ಇದರಿಂದ ಕೊಡಗು ಚಿಕ್ಕಮಗಳೂರಲ್ಲಿ ತೋಟ ನಾಷವಾಗಬಹುದು. ಕಾಡುಪ್ರಾಣಿ ಹಾವಳಿ ಹೆಚ್ಚಾಗಿದ್ದು. ವಿದ್ಯುತ್ ಬೇಲಿ ನಿರ್ಮಾಣಕ್ಕೆ ಸರ್ಕಾರ 50% ಸಬ್ಸೀಡಿ ಕೊಡುವ ಅಧಿಸೂಚನೆ ಇದ್ದರು ಎರಡು ವರ್ಷದಿಂದ ಯಾರಿಗು ಕೊಟ್ಟಿಲ್ಲ.. ಕ್ರಮವಹಿಸಿ ಎಂದು ಸಮಸ್ಯೆ ಹೇಳಿಕೊಂಡರು.
ಕಾರ್ಯಕ್ರಮದಲ್ಲಿ ರಾಜ್ಯ ಬೆಳೆಗಾರರ ಸಂಘದ ಅಧ್ಯಕ್ಷ ಹಳಸೆ ಶಿವಣ್ಣ.ತಾಲ್ಲೂಕು ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ. ಜಯರಾಮ್ ಬಿದರಹಳ್ಳಿ . ಪ್ರದೀಪ್ ಕೆಂಜಿಗೆ. ಕಲ್ಲೇಶ್ ಮಾಕೋನಹಳ್ಳಿ. ಡಿ ಎಸ್ ರಘು. ಮನು ಕತ್ಲೆಕಾನ್. ಭರತ್ ಮಡ್ಡಿಕೆರೆ ಮತ್ತಿತರರಿದ್ದರು
