Saturday, September 19, 2026
Homeಜಿಲ್ಲಾಸುದ್ದಿಸಿಎಂ ಡಿಕೆಶಿ ಆಗಮನಕ್ಕೂ ಮುನ್ನ ಕಸ್ತೂರಿ ರಂಗನ್ ವರದಿ ವಿರೋಧಿಸಿ ರೈತರಿಂದ ಪಾದಯಾತ್ರೆ!

ಸಿಎಂ ಡಿಕೆಶಿ ಆಗಮನಕ್ಕೂ ಮುನ್ನ ಕಸ್ತೂರಿ ರಂಗನ್ ವರದಿ ವಿರೋಧಿಸಿ ರೈತರಿಂದ ಪಾದಯಾತ್ರೆ!

Telegram Group
Join Now

 ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಲೆನಾಡಿನಲ್ಲಿ ರೈತ ಕಹಳೆ ಮೊಳಗಿದೆ. ಇಂದು ಕಾಫಿನಾಡು ಚಿಕ್ಕಮಗಳೂರಿಗೆ ನಾಡಿನ ದೊರೆ ಡಿ.ಕೆ ಶಿವಕುಮಾರ್ ಅವರು ಭೇಟಿ ನೀಡ್ತಿದ್ದಾರೆ.

ಕಸ್ತೂರಿ ರಂಗನ್ ವರದಿ ಜಾರಿ ಕುರಿತು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಲೆನಾಡಿಗರು, ತಮ್ಮ ಆಕ್ರೋಶ ವ್ಯಕ್ತಪಡಿಸುವ ದೃಷ್ಠಿಯಿಂದ ಸಂಗಮೇಶ್ವರ ಪೇಟೆಯಿಂದ ಬಾಳೆಹೊನ್ನೂರುವರೆಗೆ 20 ಕಿಲೋ ಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ.

ಈ ಪಾದಯಾತ್ರೆಯಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾವಿರಾರು ಜನರು ಭಾಗಿಯಾಗಿದ್ದು, ಬಾಳೆಹೊನ್ನೂರು ತಲುಪಿದ ಬಳಿಕ ಸಿಎಂ ಡಿಕೆಶಿ ಅವರಿಗೆ ತಮ್ಮ ಅಭಿಪ್ರಾಯವನ್ನ ತಿಳಿಸಲಿದ್ದಾರೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ಮಹತ್ವವನ್ನ ಪಡೆದುಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!