Saturday, September 19, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಭಾವನೆ ಮೇಲೆ ರಾಜಕಾರಣ ಮಾಡುತ್ತಿಲ್ಲ, ಬದುಕಿನ ರಾಜಕಾರಣ ಮಾಡುತ್ತಿದ್ದೇನೆ: ಡಿ.ಕೆ.ಶಿವಕುಮಾರ್

ಬಾಳೆಹೊನ್ನೂರು: ಭಾವನೆ ಮೇಲೆ ರಾಜಕಾರಣ ಮಾಡುತ್ತಿಲ್ಲ, ಬದುಕಿನ ರಾಜಕಾರಣ ಮಾಡುತ್ತಿದ್ದೇನೆ: ಡಿ.ಕೆ.ಶಿವಕುಮಾರ್

Telegram Group
Join Now

ಚಿಕ್ಕಮಗಳೂರು :ಕಸ್ತೂರಿ ರಂಗನ್‌ ವರದಿ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಲು ಸರಿಯಾಗಲ್ಲ ಎಂದು ನಿಮ್ಮ ಸಮಸ್ಯೆಗಳನ್ನ ನಿಮ್ಮ ಜೊತೆ ಕೇಳೋಣವೆಂದೆ ಇಲ್ಲಿ ಬಂದಿದ್ದೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಹೌದು .. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿಗೆ ಭೇಟಿ ನೀಡಿದ  ಅವರು ಕಸ್ತೂರಿ ರಂಗನ್‌ ವರದಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ನಿಮ್ಮ ಬದುಕನ್ನ ಬದಲಿಸಬೇಕು, ಬದಲಾವಣೆ ತರಬೇಕು ಅನ್ನೋದು ನನ್ನ ಸಂಕಲ್ಪ ಭಾವನೆ ಮೇಲೆ ರಾಜಕಾರಣ ಮಾಡುತ್ತಿಲ್ಲ, ಬದುಕಿನ ರಾಜಕಾರಣ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಹಾಗೆ ನಾನು ಹೃದಯಶ್ರೀಮಂತಿಕೆ ಇಟ್ಟುಕೊಂಡಿರೋ ವ್ಯಕ್ತಿ ಜನರ ಭಾವನೆ ತಿಳಿದು ಅಸೆಂಬ್ಲಿಯಲ್ಲಿ ಉತ್ತರಿಸಲು ಬಂದಿದ್ದೇನೆ.ರಾಜಕಾರಣಿಗಳು, ರೈತ ಮುಖಂಡರು ನನಗೆ ಸಾಕಷ್ಟು ಮಾಹಿತಿ ನೀಡಿ ಮಾರ್ಗದರ್ಶನ ನೀಡಿದ್ದಾರೆ.

ಮಳೆ ಇಲ್ಲ, ಬರವಿದೆ, ಪ್ರಧಾನಿ ಕೂಡ ನಮಗೆ ಸೂಚನೆ ನೀಡಿದ್ದರು. ರೈತರ ಸಮಸ್ಯೆ, ಬರದ ಬಗ್ಗೆ 3 ದಿನ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ನಿಮ್ಮ ನಂಬಿಕೆ, ಪ್ರೀತಿ, ನಂಬಿಕೆಗೆ ನನ್ನ ಕೋಟಿ ನಮಸ್ಕಾರ.ನೀವು ನನ್ನ ಭೇಟಿ ಮಾಡಲು ಕಷ್ಟ ಆಗಬಹುದು, ಅದಕ್ಕೆ ಪ್ರಜಾಸೇವೆ ಇಲಾಖೆ ತಂದಿದ್ದೇನೆ ಎಂದರು.

ರೈತರು ಯಾರಿಗೂ ಕಡಿಮೆ ಇಲ್ಲ, ರೈತರು ನನ್ನ ಸರ್ಕಾರದ ಗಮನಕ್ಕೆ ಎಲ್ಲವನ್ನೂ ತಂದಿದ್ದಾರೆ, ಮನವಿ ಮಾಡಿದ್ದಾರೆ ನಿಮ್ಮ ಮನವಿಗೆ ಸ್ಪಂದಿಸುತ್ತೇನೆ ಎಂದು ಜನರಿಗೆ ಮನದಟ್ಟು ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!