ಹಾಸನ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆಯಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನವ ವಿವಾಹಿತೆ ನಿಗೂಢ ರೀತಿಯ ಕಣ್ಮರೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.ಕಣ್ಮರೆಯಾಗಿರೊ ಪ್ರಿಯಾಂಕಗೆ ಈ ಮೊದಲೇ ಮದುವೆ ಆಗಿತ್ತು ಅಂತ ಗಂಡ ರಾಜಶೇಖರನ್ನ ಸಂಬಂಧಿಕರು ಸಾಲು ಸಾಲು ಆರೋಪಗಳನ್ನ ಮಾಡ್ತಿದ್ದಾರೆ.
ಈ ಘಟನೆ ಹಾಸನ ಜಿಲ್ಲೆಯ,ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪ್ರಿಯಾಂಕಳಿಗೆ ಈ ಮೊದಲೇ ಒಬ್ಬ ಹುಡುಗನ ಪರಿಚಯ ಇತ್ತು.ಆತನ ಜೊತೆ ಮದುವೆ ಆಗಿತ್ತು.ಆದ್ರೆ, ಪ್ರಿಯಾಂಕ ಕುಟುಂಬಸ್ಥರು ಈ ವಿಚಾರವನ್ನ ಮುಚ್ಚಿಟ್ಟು,ಪ್ರಿಯಾಂಕಳನ್ನ ಬೆದರಿಸಿ ಆಕೆಯ ಮೇಲೆ ಒತ್ತಡ ತಂದು ಮನೆಯವ್ರು ಮದುವೆ ಮಾಡಿದ್ದಾರೆ.
ಎಲ್ಲಿ ಮದುವೆಗೆ ಮುಂಚೆ ಆ ಹುಡುಗನ ಜೊತೆ ಓಡಿ ಹೋಗ್ತಾಳೆ ಅಂತ ಆಕೆಗೆ ಮೊಬೈಲ್ ಕೂಡ ಕೊಡಿಸಿರಲಿಲ್ಲ.ಮದುವೆ ದಿನ ಪೊಲೀಸರ ಜೊತೆ ಆ ಹುಡುಗ ಬಂದಿದ್ದ.ಪ್ರಿಯಾಂಕ ಕುಟುಂಬದವ್ರು ಮಾಡಿದ ತಪ್ಪಿಗೆ ನಮ್ಮ ಹುಡುಗ ರಾಜಶೇಖರನ ಜೀವನ ಹಾಳಾಗಿದೆ ಎಂದು ಗಂಡ ರಾಜಶೇಖರ್ನ ದೊಡ್ಡಪ್ಪ ಮಂಜುನಾಥ ಹೇಳಿದ್ದಾರೆ.ಪ್ರಿಯಾಂಕಳಿಗೆ ಈಜು ಕೂಡ ಬರ್ತಿತ್ತು.
ಆಕೆ ಸತ್ತಿದ್ದಾಳೋ,ಬದು ಕಿದ್ದಾಳೊ ಅನ್ನೋ ಅನುಮಾನ ಕೂಡ ನಮಗೆ ಇದೆ ಅಂತ ಗಂಡ ರಾಜಶೇಖರ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸ್ತಿದ್ದಾರೆ.
ಒಟ್ನಲ್ಲಿ,ನವ ವಿವಾಹಿತೆ ಪ್ರಿಯಾಂಕಳ ನಿಗೂಢ ರೀತಿಯ ಕಣ್ಮರೆ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ.ಆಕೆಗೆ ಈಜು ಕೂಡ ಬರ್ತಿತ್ತು ಆಕೆ ಸತ್ತಿದ್ದಾಳೊ, ಬದುಕಿದ್ದಾಳೋ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ.
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾಜಶೇಖರ, ಮಾವ ದೊರೆಸ್ವಾಮಿ ಹಾಗೂ ಅತ್ತೆ ವಿಜಯಲಕ್ಷ್ಮಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಪ್ರಿಯಾಂಕಗೆ ಈಗಾಗಲೇ ಪ್ರೇಮಿಯ ಜೊತೆ ಮದುವೆಯಾಗಿತ್ತು. ಆಕೆಯನ್ನು ಅವಳ ತಂದೆ ತಾಯಿ ವಾಪಸ್ ಕರೆತಂದು ವಿಷದ ಬಾಟಲ್ ಹಿಡಿದು ಬೆದರಿಸಿ, ರಾಜಶೇಖರನನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದರು. ಈ ವಿಚಾರ ಮುಚ್ಚಿಟ್ಟು ಮದುವೆ ಮಾಡಿದ್ದರು. ಅವರು ಮಾಡಿದ ತಪ್ಪಿಗೆ ನಮ್ಮ ಹುಡುಗನ ಜೀವನ ಹಾಳಾಗಿದೆ ಎಂದು ರಾಜಶೇಖರನ ಪೋಷಕರು ಆರೋಪಿಸಿದ್ದಾರೆ.
