Tuesday, September 29, 2026
Homeಜಿಲ್ಲಾಸುದ್ದಿBelur: ಸಹೋದರರ ನಡುವೆ ಜಮೀನಿಗಾಗಿ ಜಗಳ: ತಮ್ಮನ ಕೊಲೆಯಲ್ಲಿ ಅಂತ್ಯ!

Belur: ಸಹೋದರರ ನಡುವೆ ಜಮೀನಿಗಾಗಿ ಜಗಳ: ತಮ್ಮನ ಕೊಲೆಯಲ್ಲಿ ಅಂತ್ಯ!

Telegram Group
Join Now

ಬೇಲೂರು: ಸಹೋದರರ ನಡುವೆ ಜಮೀನಿಗಾಗಿ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಘು (44) ಅಣ್ಣನಿಂದಲೇ ಕೊಲೆಯಾದ ವ್ಯಕ್ತಿ. ದೇವರಾಜ್ (46) ಕೊಲೆಗೈದ ಆರೋಪಿಯಾಗಿದ್ದಾನೆ. ಸೆ.24 ರಂದು ಜಮೀನು ವಿವಾದ ಹಾಗೂ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತಂದ ವಿಚಾರಕ್ಕೆ ಸಹೋದರರ ನಡುವೆ ಜಗಳ ನಡೆದಿತ್ತು.

ಜಗಳ ವಿಕೋಪಕ್ಕೆ ತಿರುಗಿ ತಮ್ಮ ರಘುಗೆ ಅಣ್ಣ ದೇವರಾಜ್ ಚಾಕುವಿನಿಂದ ಇರಿದಿದ್ದ. ತೀವ್ರವಾಗಿ ಗಾಯಗೊಂಡಿದ್ದ ರಘು ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ರಘು ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!