ಬೆಂಗಳೂರು: ಕುಮಾರ ಕೃಪಾ ಗೆಸ್ಟ್ ಹೌಸ್‌ಗೆ ಮರುನಾಮಕರಣ ಮಾಡಲಾಗಿದೆ. ಇನ್ಮುಂದೆ ‘ಗಂಗಾ’ ಗೆಸ್ಟ್ ಹೌಸ್ ಅಂತಾ ಹೆಸರು ಬದಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರ ಅಧಿಕೃತ ನಿವಾಸವಾಗಿರುವ ಈ ಕಟ್ಟಡ ಸುಮಾರು 160 ವರ್ಷಗಳ ಇತಿಹಾಸ ಹೊಂದಿದೆ.
1880ರಲ್ಲಿ ಕಲ್ಲಿನಿಂದ ಎರಡು ಅಂತಸ್ತುಗಳಲ್ಲಿ ನಿರ್ಮಾಣಗೊಂಡಿದ್ದ ಈ ಕಟ್ಟಡ, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ನಿವಾಸವಾಗಿತ್ತು. ಬಳಿಕ ಹಲವು ಗಣ್ಯರ ವಾಸ್ತವ್ಯಕ್ಕೆ ಸಾಕ್ಷಿಯಾಗಿರುವ ಈ ಐತಿಹಾಸಿಕ ಕಟ್ಟಡದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ಗಣ್ಯರು ತಂಗಿದ್ದರು.
ಇದೀಗ ಕುಮಾರ ಕೃಪಾ ಗೆಸ್ಟ್ ಹೌಸ್‌ಗೆ ‘ಗಂಗಾ’ ಎಂದು ಹೊಸ ಹೆಸರು ಇಡಲಾಗಿದ್ದು, ಐತಿಹಾಸಿಕ ಹಿನ್ನೆಲೆಯುಳ್ಳ ಕಟ್ಟಡ ಹೊಸ ಗುರುತಿನೊಂದಿಗೆ ಗಮನ ಸೆಳೆಯುತ್ತಿದೆ.
