Friday, October 23, 2026
Homeಜಿಲ್ಲಾಸುದ್ದಿFree Eye Check Up: ಮೇಲ್ಪಾಲ್ʼನಲ್ಲಿ ಅಮ್ಮ ಫೌಂಡೇಶನ್‌ನ 38ನೇ ಉಚಿತ ನೇತ್ರ ತಪಾಸಣೆ,...

Free Eye Check Up: ಮೇಲ್ಪಾಲ್ʼನಲ್ಲಿ ಅಮ್ಮ ಫೌಂಡೇಶನ್‌ನ 38ನೇ ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ!

Telegram Group
Join Now

ಕೊಪ್ಪ: ತುಮಖಾನೆಯ ಅಮ್ಮ ಫೌಂಡೇಶನ್ ವತಿಯಿಂದ 38ನೇ ಆರೋಗ್ಯ ಶಿಬಿರದ ಅಂಗವಾಗಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ದಿನಾಂಕ 25.10.2026ರಂದು ಎನ್. ಆರ್.ಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿಯ ಮೇಲ್ಪಾಲ್‌ʼನ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದು ಬೆಳಗ್ಗೆ 8.30ರಿಂದ ಮಧ್ಯಾಹ್ನ 2.30ರವರೆಗೆ ನಡೆಯಲಿದೆ.

ಹೌದು .. ಉಡುಪಿಯ ಪ್ರಸಾದ್‌ ನೇತ್ರಾಲಯ ಮತ್ತು ಪ್ರಶಮನಿ ಆಸ್ಪತ್ರೆಯ ವೈದ್ಯರ ತಂಡದಿಂದ ಉಚಿತ ನೇತ್ರ ತಪಾಸಣೆ ಹಾಗೂ ಆರೋಗ್ಯ ಶಿಬಿರ ನಡೆಯಲಿದ್ದು ಇದರ ಜೊತೆ ಉಚಿತ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ನಡೆಯಲಿದೆ. ಇದೇ ವೇಳೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವೂ ಜರುಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಂಕಟಪ್ಪ ಆಚಾರ್‌ ವಹಿಸಿದ್ದು  ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿ ಘನ ಉಪಸ್ಥಿತಿಯಲ್ಲಿ, ತೆಂಗಿನಮನೆಯ ಕೃಷಿಕರಾದ ಪ್ರಭಾಕರ ಪೂಜಾರಿಯವರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಇದೇ ವೇಳೆ ಎನ್.ಆರ್.ಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಪಿ.ಜೆ. ಅಂತೋನಿ, ವಕೀಲರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಮುಡಬಾಗಿಲು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಚಿನ್‌ ಬಾಳೆಹೊನ್ನೂರು‌,  ಮೇಲ್ಪಾಲ್ʼನ ಕೃಷಿಕರಾದ ಶ್ರೀಮತಿ ಸುಚಿತ್ರ ಹೆಗ್ಡೆಯವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!