ಚಿಕ್ಕಮಗಳೂರು : ಟ್ರ್ಯಾಕ್ಟರ್ ಗೆ ದಾರಿ ಬಿಡದ ವಿಚಾರಕ್ಕೆ ಮರದ ದೊಣ್ಣೆಯಿಂದ ಮೂವರಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸಗನೀಪುರ ಗ್ರಾಮದಲ್ಲಿ ನಡೆದಿದೆ.
ರಾಸುಗಳನ್ನ ಮೇಯಲು ಕರೆದೊಯ್ಯುವಾಗ ಟ್ರ್ಯಾಕ್ಟರ್ ಗೆ ದಾರಿ ಬಿಡದ ವಿಚಾರವಾಗಿ ಒಂದು ತಿಂಗಳ ಹಿಂದೆ ಗಲಾಟೆ ನಡೆದಿತ್ತು. ಅದೇ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಮಲ್ಲೇಶ, ಮಂಜು ಸೇರಿ ಮೂವರು ಯುವಕರಿಂದ ಮದನ್ ಎಂಬುವರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಲಾಗಿದೆ.
ದೇವಸ್ಥಾನಕ್ಕೆ ಹೋಗುತ್ತಿದ್ದ ಮದನ್ ಮೇಲೆ ಹಿಂದಿನಿಂದ ಬಂದು ನಡು ಮಧ್ಯಾಹ್ನ ರಸ್ತೆಯಲ್ಲಿ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಹಲ್ಲೆಯಿಂದ ಗಂಭೀರ ಗಾಯಗೊಂಡ ಮದನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
