Monday, November 9, 2026
Homeಜಿಲ್ಲಾಸುದ್ದಿದೇವಿರಮ್ಮ ಬೆಟ್ಟದಲ್ಲಿ ಅವ್ಯವಸ್ಥೆ ಜನರ ಬದುಕು ಪರಿಸರದ ಜೊತೆ ಚೆಲ್ಲಾಟ: ನಡೆದಿರುವ ಅನಾಹುತಕ್ಕೆ ಯಾರು ಹೊಣೆ?...

ದೇವಿರಮ್ಮ ಬೆಟ್ಟದಲ್ಲಿ ಅವ್ಯವಸ್ಥೆ ಜನರ ಬದುಕು ಪರಿಸರದ ಜೊತೆ ಚೆಲ್ಲಾಟ: ನಡೆದಿರುವ ಅನಾಹುತಕ್ಕೆ ಯಾರು ಹೊಣೆ? ಸೂಕ್ತ ವೈಜ್ಞಾನಿಕ ಮುಂಜಾಗೃತ ಕ್ರಮ ಕೈಕೊಳ್ಳಲು ಜಿ. ವೀರೇಶ್ ಒತ್ತಾಯ

Telegram Group
Join Now

ಚಿಕ್ಕಮಗಳೂರು:  ಪುರಾಣ ಪ್ರಸಿದ್ಧ ದೇವಿರಮ್ಮ ಬೆಟ್ಟಕ್ಕೆ ಈ ಭಾರಿ ದೀಪಾವಳಿಯ ದಿನದಂದು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬೆಟ್ಟ ಹತ್ತಿದ್ದರು. ಒಬ್ಬರು ಮೃತಪಟ್ಟರೆ,ನೂರಾರು ಜನ ಗಾಯಗೊಂಡರು ಮತ್ತೆ ಅಲ್ಲಿಗೆ ಬರುವ ಮಹಿಳಾ ಸಮುದಾಯಕ್ಕೆ ತೀವ್ರ ತೊಂದರೆ ಉಂಟಾಗಿತ್ತು ಮತ್ತು ಅಲ್ಲಿನ ಪರಿಸರ ಕೂಡ ಹಾನಿಯುಂಟಾಗಿದೆ,ಬೆಟ್ಟದಲ್ಲಿ ಪ್ಲಾಸ್ಟಿಕ್ ಇತರೆ ತ್ಯಾಜ್ಯ ಪರಿಸರದಲ್ಲಿ ಸೇರಿ ಮಾಲಿನ್ಯ ಉಂಟಾಗಿದೆ,ಸೂಕ್ತ ಪೂರ್ವ ತಯಾರಿ ಮತ್ತು ಮುಂಜಾಗೃತ ಕ್ರಮಕ್ಕೆ ಯಾವುದಕ್ಕೂ ಜಿಲ್ಲಾಡಳಿತ ,ಸರ್ಕಾರ ಮತ್ತು ಜನಪ್ರತಿನಿಧಿಗಳು ಮುತುವರ್ಜಿ ವಹಿಸದೆ ಈ ಭಾರಿ ಹಲವರಿಗೆ ತೊಂದರೆ ಉಂಟಾಗಿದೆ.ಜನಪ್ರತಿನಿಧಿಗಳು ಕೇವಲ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಣೆ ಮಾಡುವುದು ಬಿಟ್ಟು ಮೊದಲೇ ಮುಂಜಾಗೃತ ಕೆಲಸ ಮಾಡಿದ್ದಾರೆ ಅನಾಹುತ ತಪ್ಪಿಸಬಹುದಿತ್ತು.ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ.

ಬೆಟ್ಟದಲ್ಲಿ ಸಾಕಷ್ಟು ಮಹಿಳಾ ಪೊಲೀಸ್ ವ್ಯವಸ್ಥೆ ಇರಲಿಲ್ಲ.ದೂರದಿಂದ ಬರುವ ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ಸೂಕ್ತ ರಕ್ಷಣೆ ಇರಲಿಲ್ಲ.ವೈಜ್ಞಾನಿಕವಾಗಿ ಒಂದಷ್ಟು ಪೂರ್ವಭಾವಿ ತಯಾರಿ ಮಾಡಲು ವಿಫಲವಾದ ಜಿಲ್ಲಾಡಳಿತ ಮತ್ತು ಸರ್ಕಾರ.

ಹಿಂದಿನ ಪದ್ಧತಿಯಂತೆರಾತ್ರಿ ಬೆಟ್ಟ ಹತ್ತಲು ನಿಲ್ಲಿಸಿದ್ದು ಕೂಡ ಈ ಭಾರಿ ಹಗಲು ಸಮಯದಲ್ಲಿ ಜನ ದಟ್ಟಣೆ ಜಮಾವಣೆಗೊಳ್ಳಲು ಕಾರಣವಾಗಿದೆ.ಇಲ್ಲಿ ರಾತ್ರಿ ವೇಳೆಯಲ್ಲಿ ಪುರುಷರಿಗೆ ಬೆಟ್ಟ ಹತ್ತಲು ವ್ಯವಸ್ಥೆ ಕಲ್ಪಿಸಿದ್ದಾರೆ ಉತ್ತಮವಾಗಿತ್ತು .ಹಿಂದಿನ ವರ್ಷಗಳಲ್ಲಿ ಪುರುಷರು ರಾತ್ರಿ ವೇಳೆಯಲ್ಲಿ ಬೆಟ್ಟ ಹತ್ತಿ ವಾಪಸಾಗುತ್ತಿದ್ದರು. .ಇನ್ನೂ ಮಹಿಳೆಯರಿಗೆ ಮಕ್ಕಳಿಗೆ ವಿಶೇಷವಾಗಿ ಹಗಲಿನಲ್ಲಿ ಬೆಟ್ಟ ಹತ್ತಲು ವ್ಯವಸ್ಥೆ ಮಾಡಬೇಕು.ಇದರಿಂದ ಅಲ್ಲಿ ಪುರುಷರು ಮಹಿಳೆಯರು ಜಮಾವಣೆ ಗೊಳ್ಳುವುದು ತಪ್ಪುತ್ತಿತ್ತು.ಇನ್ನೂ ಬೆಟ್ಟದ ಮೇಲೆ ಸರಿಯಾಗಿ ಸ್ಥಳ ಇಲ್ಲಿ.ಇದನ್ನು ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ಅಲ್ಲಿ ಎಷ್ಟು ಜನ ಒಮ್ಮೆಲೆ ಹೋಗಬೇಕು,ಜನರ ತಾಳಿಕೆ ಸಾಮರ್ಥ್ಯ ಎಲ್ಲವನ್ನು ಗಮನಿಸಿ ಸೂಕ್ತ ವ್ಯವಸ್ಥೆ ಮಾಡಲು ಅವಕಾಶ ಇತ್ತು.ಬೆಟ್ಟದ ಮಣ್ಣು ಮುರ ಮಣ್ಣಾಗಿದ್ದು ಇದು ಅಲ್ಲಿನ ಬಂಡೆಗಳ ಜೊತೆ ಮಿಶ್ರಣಗೊಂಡಿದೆ, ಇದು ತುಂಬ ತೂಕ ಮತ್ತು ಒತ್ತಡವನ್ನು ತಡೆಯಲು ಕಷ್ಟ.ಬೆಟ್ಟದ ಭಾಗಗಳು ಕುಸಿಯುವ ಅಂತಕ್ಕೆ ಹೋಗುತ್ತದೆ.

ಲಕ್ಷಾಂತರ ಜನ ಇಲ್ಲಿ ಬಂದು ಹೋಗುವುದರಿಂದ ಇಲ್ಲಿನ ಪರಿಸರದ ಮೇಲೆ ಒತ್ತಡ ಉಂಟಾಗುತ್ತದೆ.ಎಲ್ಲವನ್ನು ಪರಿಶೀಲಿಸಿ ವೈಜ್ಞಾನಿಕವಾಗಿ ಮುಂಜಾಗೃತ ಕ್ರಮಗಳನ್ನು ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸ್ಥಳೀಯರು ಒಳಗೊಂಡಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಕಾರ್ಯ ಆಗಬೇಕಿತ್ತು.ಸೂಕ್ತವಾಗಿ ಕ್ರಮಗಳನ್ನು ಕೈಗೊಂಡಿದ್ದಾರೆ ಈ ಅನಾಹುತಗಳನ್ನು ತಪ್ಪಿಸಲು ಸಾಧ್ಯವಿತ್ತು.ಈ ದುರಂತಕ್ಕೆ ಅನಾಹುತಕ್ಕೆ ಯಾರು ಹೊಣೆ? ಜಿಲ್ಲಾಡಳಿತನ?ಜನಪ್ರತಿನಿಧಿಗಳ? ದೇವಾಲಯದ ಆಡಳಿತ ಮಂಡಳಿ ಮುಜುರಾಯಿ ಇಲಾಖೆನ?ಗಾಯಾಳುಗಳಿಗೆ ಸೂಕ್ತ ಪರಿಹಾರ ಕೂಡಬೇಕು,ಚಿಕಿತ್ಸೆ ಕೊಡಿಸಬೇಕು.ಮುಂದಿನ ವರ್ಷಗಳಲ್ಲಿ ಬೆಟ್ಟ ಹತ್ತುವ ಜನರ ಆರೋಗ್ಯ ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿದವರಿಗೆ ಮಾತ್ರ ಬೆಟ್ಟ ಹತ್ತಲು ಅವಕಾಶ ಕೊಟ್ಟರೆ ಒಳ್ಳೆಯದು.

ಮುಂದಿನ ವರ್ಷಗಳಲ್ಲಿ ಬೇರೆ ಜಿಲ್ಲೆಗಳಿಂದ ಸಾವಿರಾರು ಪೊಲೀಸ್, ಅಗ್ನಿ ಶಾಮಕ ಸಿಬ್ಬಂದಿ ಮತ್ತು ಮಹಿಳಾ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು.

ಈ ವರ್ಷ ದಿಢೀರ್ ಉದ್ಭವಿಸಿದ ಅನಾಹುತಗಳನ್ನು ಧೈರ್ಯವಾಗಿ ಎದುರಿಸಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್,ಅಗ್ನಿಶಾಮಕ , ಅರಣ್ಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ.ಮುಂದಿನ ವರ್ಷದಲ್ಲಿ ಎಲ್ಲವನ್ನು ಗಣನೆಗೆ ತೆಗೆದುಕೊಂಡು ಅಲ್ಲಿನ ಪರಿಸರ ಮತ್ತು ಜನ ಸಮುದಾಯದ ಬಗ್ಗೆ ಕಾಳಜಿ ಕೊಟ್ಟು ಸೂಕ್ತ ವೈಜ್ಞಾನಿಕ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ಸರ್ಕಾರ, ಜನಪ್ರತಿನಿಧಿಗಳ ಜವಾಬ್ದಾರಿ ಹೆಚ್ಚಿದೆ ಸೂಕ್ತ ವೈಜ್ಞಾನಿಕ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕೆಂದು ಪರಿಸರ ಕಾರ್ಯಕರ್ತ ಜಿ.ವೀರೇಶ್ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!