ಹಾಸನ: ಹಾಸನಾಂಬಾ ದೇವಿ ದರ್ಶನ ಸಂಪನ್ನಗೊಂಡಿದ್ದು ನವೆಂಬರ್ 11 ರ ಮಧ್ಯಾಹ್ನ 1.37ಕ್ಕೆ ಸರಿಯಾಗಿ ಶಾಸ್ತ್ರೋಕ್ತವಾಗಿ ದೇಗುಲದ ಬಾಗಿಲನ್ನ ಮುಚ್ಚಲಾಗಿದೆ.
ಮಧ್ಯಾಹ್ನ 12 ಗಂಟೆಯಿಂದ 1.30ರವರೆಗೆ ರಾಹುಕಾಲ ಇದ್ದ ಹಿನ್ನಲೆ ಈ ಬಾರಿ ತಡವಾಗಿ ಗರ್ಭಗುಡಿಯ ಬಾಗಿಲನ್ನ ಮುಚ್ಚಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ಡಿಸಿ ಲತಾ ಕುಮಾರಿ ನೇತೃತ್ವದಲ್ಲಿ ಬಾಗಿಲು ಬಂದ್ ಮಾಡಲಾಗಿದೆ.
ಸುಮಾರು 31 ಲಕ್ಷಕ್ಕೂ ಹೆಚ್ಚು ಭಕ್ತರು ತಾಯಿ ದರ್ಶನ ಪಡೆದಿದ್ದು, ಮುಂದಿನ ವರ್ಷ ಅಂದ್ರೆ 2027 ಅ.21 ರಿಂದ 31 ರವರೆಗೆ ಮತ್ತೆ ದೇವಿ ದರ್ಶನ ನೀಡಲಿದ್ದಾಳೆ.
