Wednesday, November 11, 2026
Homeಜಿಲ್ಲಾಸುದ್ದಿChickmagalore: ಕೈಗಾರಿಕಾ ಪ್ರದೇಶದ ವಿರುದ್ಧ ರೈತರ ಆಕ್ರೋಶ: ಧರಣಿ ವೇಳೆ ಮೂವರು ರೈತರು ಅಸ್ವಸ್ಥ

Chickmagalore: ಕೈಗಾರಿಕಾ ಪ್ರದೇಶದ ವಿರುದ್ಧ ರೈತರ ಆಕ್ರೋಶ: ಧರಣಿ ವೇಳೆ ಮೂವರು ರೈತರು ಅಸ್ವಸ್ಥ

Telegram Group
Join Now

ಚಿಕ್ಕಮಗಳೂರು: ಜಿಲ್ಲೆಯ ಹೊರವಲಯದ ಗೌಡನಹಳ್ಳಿ ಕೈಗಾರಿಕಾ ಪ್ರದೇಶದ ವಿರುದ್ಧ ರೈತರು, ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಕೈಗಾರಿಕೆಯಿಂದ ಮಾಲಿನ್ಯ ಉಂಟಾಗ್ತಿದೆ. ಇಲ್ಲಿಂದ ಕೈಗಾರಿಕೆ ತೊಲಗಬೇಕು ಅಂತಾ ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಗ್ರಾಮದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ಹಮ್ಮಿಕೊಂಡು ಡಿಸಿ ಸಮಸ್ಯೆ ಆಲಿಸಬೇಕೆಂದು ಆಗ್ರಹಿಸಿದ್ರು. ಇದ್ರಿಂದ ಎಚ್ಚೆತ್ತ ಪೊಲೀಸರು, ಅಹಿತಕರ ಘಟನೆ ನಡೆಯದಂತೆ ಆಜಾದ್ ಪಾರ್ಕ್ ವೃತ್ತದಲ್ಲಿ ಭದ್ರತೆ ಕೈಗೊಂಡು ಬ್ಯಾರಿಕೇಡ್ ಹಾಕಿ ರಸ್ತೆ ಮುಚ್ಚಿದ್ರು.

ಇನ್ನು ಆಕ್ರೋಶದ ಮಧ್ಯೆ ಧರಣಿಯಲ್ಲಿ ಭಾಗಿಯಾಗಿದ್ದ ರೈತರಾದ ಲಕ್ಷ್ಮಣ್, ಮಲ್ಲಿಕಾರ್ಜುನ್ ಬಿಸಿಲಿನ ತಾಪಕ್ಕೆ ಸುಸ್ತಾಗಿ ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆ ಸೇರಿದ್ದಾರೆ.

ಪ್ರತಿಭಟನಾ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಡಿಸಿ ಭೇಟಿ ನೀಡಿದ್ರು. ಈ ವೇಳೆ 3ನೇ ರೈತ ಅಸ್ವಸ್ಥಗೊಂಡಿದ್ದು, ಸ್ಥಳಿಯರನ್ನ ಕೆರಳಿಸಿತ್ತು. ಮಾಲಿನ್ಯದ ಸಮಗ್ರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು, ಡಿಸಿ ಗ್ರಾಮಕ್ಕೆ ಭೇಟಿ ನೀಡಬೇಕು ಅನ್ನೋದು ಧರಣಿನಿರತರ ಪ್ರಮುಖ ಬೇಡಿಕೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!