ಚಿಕ್ಕಮಗಳೂರು: ಜಿಲ್ಲೆ ಕೊಪ್ಪದ ಹೆಗ್ಗಾರುಕುಡಿಗೆ ಬಳಿಯ ಎಸ್ಟೇಟ್ನಲ್ಲಿ ಕಾಡುಕೋಣಗಳು ಕಾರ್ಮಿಕರನ್ನ ಅಟ್ಟಾಡಿಸಿವೆ. ಅಂಗಡಿಗೆ ಹೋಗ್ತಿದ್ದ ಕಾರ್ಮಿಕರಿಗೆ ಎದುರಾದ ಕಾಡು ಕೋಣಗಳು ದಿಢೀರನೇ ಬೆನ್ನಟ್ಟಿದ್ವು. ಗಾಬರಿ ಬಿದ್ದ ಕಾರ್ಮಿಕರು, ಮರ ಏರಿ ಕುಳಿತು ಜೀವ ಉಳಿಸಿಕೊಂಡಿದ್ದಾರೆ.
ಆ ಬಳಿಕವೂ 15 ನಿಮಿಷಕ್ಕೂ ಹೆಚ್ಚು ಕಾಲ ಮರದ ಬುಡದಲ್ಲಿ ಲಂಗರು ಹಾಕಿದ್ದ ಕಾಡುಕೋಣಗಳು, ಗೋಳೊಯ್ದುಕೊಂಡಿದ್ವು.
ಕಾಡುಕೋಣಗಳ ಆಟಾಟೋಪವನ್ನ ಕಾರ್ಮಿಕರು ಮರದ ಮೇಲಿಂದಲೇ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
