ಬೆಂಗಳೂರು: ಯಲಹಂಕ ನ್ಯೂಟೌನ್‌ನಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಹ*ತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 30 ಲಕ್ಷಕ್ಕೆ ಸುಪಾರಿ ನೀಡಿ ಚರಣ್ ಕೊ*ಲೆ ಮಾಡಿಸಿದ ಸತ್ಯ ತನಿಖೆಯಲ್ಲಿ ರಿವೀಲ್ ಆಗಿದೆ.
ಪ್ರಕರಣದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಚರಣ್ & ಆರೋಪಿ ಕಿರಣ್ ಈ ಹಿಂದೆ ಜೊತೆಯಾಗಿ ರಿಯಲ್ ಎಸ್ಟೇಟ್ ಉದ್ಯಮ ನಡೆಸ್ತಿದ್ರು. ಆದ್ರೆ ವ್ಯವಹಾರದ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತಂತೆ. ನಂತರ ಇಬ್ಬರು ಬೇರೆ-ಬೇರೆಯಾಗಿದ್ದು, ಚರಣ್ ಕೋಟ್ಯಂತರ ಮೋಸ ಮಾಡಿದ್ದಾನೆ ಅಂತಾ ಕಿರಣ್ ದ್ವೇಷ ಸಾಧಿಸ್ತಿದ್ನಂತೆ.
ಇದೇ ಕಾರಣಕ್ಕೆ ರುದ್ರೇಶ್ ಎಂಬಾತನಿಗೆ ಕಿರಣ್ ಸುಪಾರಿ ನೀಡಿದ್ದಾನೆ ಎನ್ನಲಾಗಿದೆ. ರುದ್ರೇಶ್ ಸೂಚನೆಯಂತೆ ಇಬ್ಬರು ಕಚೇರಿ ಮುಂದೆ ಚರಣ್ ಹ* ಮಾಡಿದ್ದಾರೆ ಅನ್ನೋದು ತನಿಖೆಯಲ್ಲಿ ಬಯಲಾಗಿದೆ.
ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
