ಚಿಕ್ಕಮಗಳೂರು: ಭದ್ರಾ ಹಿನ್ನೀರಿಗೆ 56 ಆನೆಗಳನ್ನು ಸ್ಥಳಾಂತರಿಸುವ ಪ್ರಸ್ತಾವನೆಗೆ ಮಲೆನಾಡಿನ ಜನರು ಹಾಗೂ ರೈತರಿಂದ ಆತಂಕ ವ್ಯಕ್ತವಾಗಿದೆ.
ಈಗಾಗಲೇ ಮಲೆನಾಡು ಭಾಗದಲ್ಲಿ ಮಾನವ–ವನ್ಯಜೀವಿ ಸಂಘರ್ಷದಿಂದಾಗಿ 12 ಮಂದಿ ಪ್ರಾಣ ಕಳೆದುಕೊಂಡಿದ್ದು, ರೈತರ ಕೃಷಿ ಜಮೀನುಗಳು ಹಾಗೂ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತಷ್ಟು 56 ಆನೆಗಳನ್ನು ಭದ್ರಾ ಹಿನ್ನೀರು ಪ್ರದೇಶಕ್ಕೆ ಸ್ಥಳಾಂತರಿಸಿದರೆ ಮಾನವ–ಆನೆ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಸ್ಥಳೀಯ ಜನರ ಜೀವ, ಆಸ್ತಿ ಮತ್ತು ರೈತರ ಕೃಷಿ ಬದುಕಿನ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಮಾನ್ಯ ಶಾಸಕರು ಇಂದು ಅರಣ್ಯ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ, ಈ ಸ್ಥಳಾಂತರ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ಪತ್ರದ ಮೂಲಕ ಮನವಿ ಸಲ್ಲಿಸಿದರು.
ಮಲೆನಾಡಿನ ಜನರ ಸುರಕ್ಷತೆ ಹಾಗೂ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ 56 ಆನೆಗಳ ಸ್ಥಳಾಂತರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದರು. ಮಲೆನಾಡಿನ ಜನರ ಜೀವ ರಕ್ಷಣೆ ಮತ್ತು ರೈತರ ಬದುಕಿನ ರಕ್ಷಣೆಯೇ ಆದ್ಯತೆಯಾಗಬೇಕು.
ವರದಿ: ಶಶಿ ಬೆತ್ತದಕೊಳಲು
