ಮೂಡಿಗೆರೆ: ಹಾಸನದ ಬೇಲೂರಿನ ಆನೆಗಳ ಹಾವಳಿ ವಿಚಾರ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. 50ಕ್ಕೂ ಹೆಚ್ಚು ಅನೆಗಳನ್ನ ಭದ್ರಾ ಅರಣ್ಯಕ್ಕೆ ಓಡಿಸಲು ಮುಂದಾಗಿರುವ ಹಾಸನ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಬೇಲೂರಿನಿಂದ ಭದ್ರಾ ಅರಣ್ಯ 100 ಕಿ.ಮೀ. ದೂರವಿದೆ. ಇಲ್ಲಿಗೆ ಆನೆಗಳು ಬಂದ್ರೆ ರೈತರು, ತೋಟಗಳಲ್ಲಿನ ಕಾರ್ಮಿಕರ ಜೀವಕ್ಕೆ ಅಪಾಯ ಎದುರಾದರೆ ಯಾರು ಹೊಣೆ ಅಂತಾ ಪ್ರಶ್ನಿಸಿದ್ದಾರೆ. ಈಗ ಅಡಿಕೆ-ಕಾಫಿ ಕೊಯ್ಲಿನ ಸಮಯವಾಗಿದೆ. ಸಾವಿರಾರು ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡ್ತಿರ್ತಾರೆ.
ಹೀಗಾಗಿ ಆನೆಗಳನ್ನ ಇಲ್ಲಿಗೆ ಓಡಿಸುವ ಬದಲು ಸೆರೆಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸುವ ಕ್ರಮ ಕೈಗೊಳ್ಳಬೇಕು ಅಂತಾ ಆಗ್ರಹಿಸಿದ್ದಾರೆ. ತಮ್ಮ ತಲೆ ಮೇಲಿನ ಭಾರ ಕೆಳಗಿಳಿಸಲು ಆನೆ ಸಮಸ್ಯೆಯನ್ನ ನಮ್ಮ ತಲೆಗೆ ಕಟ್ಟಬೇಡಿ ಅಂತಾ ಕಿಡಿಕಾರಿದ್ದಾರೆ.
ಒಂದು ವೇಳೆ ಹಾಸನ ಜಿಲ್ಲಾಡಳಿತ, ಶಾಸಕರು, ಸಚಿವರು ನಮ್ಮತ್ತ ಆನೆಗಳನ್ನ ಓಡಿಸಲು ಮುಂದಾದ್ರೆ ಉಗ್ರ ಹೋರಾಟ ಮಾಡೋದಾಗಿ ಸರ್ಕಾರಕ್ಕೆ ವಾರ್ನ್ ಮಾಡಿದ್ದಾರೆ.
