ಚಿಕ್ಕಮಗಳೂರು: ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಹೆನ್ನಂಗಿಯಲ್ಲಿ ಕಾಡಾನೆ ದಾಳಿಗೆ ರೈತ ಕೃಷ್ಣಮೂರ್ತಿ ಬಲಿಯಾಗಿರುವ ಹಿನ್ನೆಲೆಯಲ್ಲಿ ಜನಾಕ್ರೋಶ ಭುಗಿಲೆದ್ದಿದೆ.

ಪದೇ ಪದೇ ಅಮಾಯಕ ಜನರು ಜೀವ ಕಳೆದುಕೊಳ್ತಿದ್ರೂ ಸಂಬಂಧಪಟ್ಟವರು ಕ್ರಮ ಕೈಗೊಳ್ತಿಲ್ಲ ಅಂತಾ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಇಂದು ಎನ್.ಆರ್ ಪುರ ಬಂದ್ ಗೆ ಕರೆ ಕೊಟ್ಟಿದೆ. ಕರೆ ಹಿನ್ನೆಲೆಯಲ್ಲಿ ಎನ್.ಆರ್ ಪುರ ತಾಲೂಕು ಸಂಪೂರ್ಣ ಬಂದ್ ಆಗಿದೆ. ಮೃತ ರೈತನ ಕುಟುಂಬಕ್ಕೆ ಐವತ್ತು ಲಕ್ಷ ಪರಿಹಾರ ನೀಡಬೇಕು, ಕಾಡಾನೆ ಸಂಚಾರ ಮಾಡುವ ಸ್ಥಳದಲ್ಲಿ ರೇಲ್ವೇ ಫೆನ್ಸಿಂಗ್ ಆಗಬೇಕು, ಭದ್ರಾ ಅಭಯಾರಣ್ಯಕ್ಕೆ ಬೇಲೂರಿನಿಂದ ಕಾಡಾನೆಗಳನ್ನ ಓಡಿಸುತ್ತೇವೆ ಎಂದಿರುವ ಸರ್ಕಾರದ ಆದೇಶ ರದ್ದಾಗಬೇಕು ಎಂಬ ಕೆಲ ಬೇಡಿಕೆಗಳನ್ನ ಇಟ್ಟುಕೊಂಡು ರೈತ ಒಕ್ಕೂಟ ಬಂದ್ ಗೆ ಕರೆ ಕೊಟ್ಟಿದೆ.
ಒಂದು ವೇಳೆ ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದಿದ್ರೆ, ಮೃತ ರೈತನ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡೋದಿಲ್ಲ ಅಂತಾ ಮೃತ ರೈತನ ಕುಟುಂಬಸ್ಥರು, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹೆನ್ನಂಗಿ ಗ್ರಾಮ ಹಾಗೂ ಎನ್.ಆರ್ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದ್ ಬಸ್ತ್ ಹಾಕಲಾಗಿದೆ. ರೈತರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿರುವ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಜನಾಕ್ರೋಶ ತಣ್ಣಾಗಾಗಬೇಕು ಅಂದ್ರೆ ರೈತರ ನ್ಯಾಯಯುತ ಬೇಡಿಕೆಗಳಿಗೆ ಸಂಬಂಧಪಟ್ಟವರು ಸ್ಪಂದಿಸಲೇಬೇಕಿದೆ.
