Thursday, November 19, 2026
Homeಕ್ರೈಮ್‌Hit & Run Case: ಬೆಂಗಳೂರಿನಲ್ಲಿ ಎದೆ ಝಲ್ ಎನಿಸುವ ಹಿಟ್ & ರನ್: ಕೂದಲೆಳೆಯ...

‌Hit & Run Case: ಬೆಂಗಳೂರಿನಲ್ಲಿ ಎದೆ ಝಲ್ ಎನಿಸುವ ಹಿಟ್ & ರನ್: ಕೂದಲೆಳೆಯ ಅಂತರದಲ್ಲಿ ಬೈಕ್‌ ಸವಾರ ಸೇಫ್!

Telegram Group
Join Now

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಎದೆ ಝಲ್ ಎನಿಸುವ ಹಿಟ್ ಆ್ಯಂಡ್ ರನ್ ಪ್ರಕರಣ ಬೆಳಕಿಗೆ ಬಂದಿದೆ.  ಮಾರತಹಳ್ಳಿ ಔಟರ್ ರಿಂಗ್ ರೋಡ್‌ ಬಳಿ ಕಾರೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಈ ವೇಳೆ ಬೈಕ್‌ ಸವಾರ ರಸ್ತೆಗೆ ಬಿದ್ದಿದ್ದಾನೆ. ಇದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್‌ ರಸ್ತೆಯಲ್ಲಿ ಬಿದ್ದಿದ್ದ ಬೈಕ್‌ ಸವಾರನ ಎದೆ ಬಳಿಗೆ ಬಂದು ನಿಂತಿದೆ. ಬಸ್‌ ಚಾಲಕನ ಸಮಯಪ್ರಜ್ಞೆಯಿಂದ ಸವಾರ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಿಯಂತ್ರಣ ತಪ್ಪಿದ ಬೈಕ್ ಸವಾರ, ಪಕ್ಕದಲ್ಲೇ ಬರುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್‌ನ ಮುಂಭಾಗದ ಚಕ್ರಗಳ ಸಮೀಪವೇ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಇತ್ತ ಅಪಘಾತ ಎಸಗಿದ ಕಾರು ಚಾಲಕ ಮಾನವೀಯತೆಯನ್ನೂ ಮರೆತು ವಾಹನ ನಿಲ್ಲಿಸದೆ ಅತಿ ರಭಸವಾಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾರತಹಳ್ಳಿ ಔಟರ್ ರಿಂಗ್ ರಸ್ತೆಯಲ್ಲಿ ನಡೆದ ಈ ಭಯಾನಕ ಅಪಘಾತದ ದೃಶ್ಯ ಕಂಡು ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.
ಅಪಘಾತ ಎಸಗಿ ಪರಾರಿಯಾದ ಕಾರು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ. ಸಂಚಾರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಪರಾರಿಯಾದ ಕಾರಿನ ಪತ್ತೆಗೆ ಅಧಿಕಾರಿಗಳು  ಕಾರ್ಯಚರಣೆಗೆ ಇಳಿದಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!