ಮೂಡಿಗೆರೆ:ರಾಜ್ಯ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಮೂಡಿಗೆರೆ ಸರ್ಕಾರಿ ಬಾಲಿಕ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ
ಹೌದು ಬಿಡದಿಯ ಐಕಾನ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಟೂರ್ನಿಯಲ್ಲಿ ಕ್ಲಬ್ ತಂಡಗಳು ಬೆರಗಾಗುವಂತೆ ಪ್ರದರ್ಶನ ತೋರಿ ಹಳ್ಳಿ ಮಕ್ಕಳ ಸಾಮರ್ಥ್ಯ ತೋರಿ ಆಪಾರ ಮೆಚ್ಚುಗೆಗೆ ಪಾತ್ರರಾಗಿದ್ದು ಶುಕ್ರವಾರ ನಡೆದ ಪಂದ್ಯಾವಳಿಯಲ್ಲಿ ಕ್ವಾಲಿಫೈಯೆರ್ ನಲ್ಲಿ ಬಾಗಲಕೋಟೆ ತಂಡದ ವಿರುದ್ದ ಸೋಲು ಕಂಡರೂ ಉತ್ತಮ ಪ್ರದರ್ಶನ ನೀಡಿ ಗ್ರಾಮೀಣ ಭಾಗದ ಮಕ್ಕಳು ಆನೇಕ ಆಗ್ರಮಾನ್ಯ ತಂಡಗಳಿಗೆ ಚಳ್ಳೆ ಹಣ್ಣು ತಿನಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಒತ್ತು ನೀಡದಿರುವ ದಿನಗಳಲ್ಲಿ ತಮ್ಮನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ವಿದ್ಯಾರ್ಥಿನಿಯರು ಸಾರಿದರು.
ರಾಜ್ಯ ಮಟ್ಟದಲ್ಲಿ ಆಡುವುದೇ ಒಂದು ದೊಡ್ಡ ಗೆಲುವು ಇದು ಮೊದಲ ಹಿನ್ನಡೆ ಅಷ್ಟೇ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಹಂಬಲ ನಮ್ಮದಾಗಿದೆ ಇಲ್ಲಿಯವರೆಗೆ ಪ್ರಯಾಣ ಬೆಳೆಸಲು ತರಬೇತುದಾರರು. ಕಾಲೇಜು ಸಿಬ್ಬಂದಿ ಹಾಗೂ ಪೋಷಕರ ಪ್ರೋತ್ಸಾಹ ನಿಜಕ್ಕೂ ಶ್ಲಾಘನೀಯ ಎಂದು ತಂಡದ ನಾಯಕಿ ಪ್ರಗತಿ ತಿಳಿಸಿದ್ದಾರೆ
ಸೋಲು ಗೆಲವು ಕ್ರೀಡಾಕೂಟದಲ್ಲಿ ಸಹಜ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಮುಖ್ಯ, ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಹ ಅವಶ್ಯಕತೆ ಇದೆ ನಮ್ಮ ಕಾಲೇಜು ವಿದ್ಯಾರ್ಥಿನಿಯರ ಪ್ರದರ್ಶನ ನಿಜಕ್ಕೂ ಬಹುಮಾನ ಪಡೆದಷ್ಟೇ ಖುಷಿ ತಂದಿದೆ. ಸೋಲು ಗೆಲುವಿನ ಮೆಟ್ಟಿಲಾಗಿದ್ದು ಮುಂದಿನ ದಿನಗಳಲ್ಲಿ ಬಹುಮಾನ ಪಡೆದು ಬರಲಿ ಎಂಬ ಹಾರೈಕೆ ನನ್ನದಾಗಿದೆ ಎಲ್ಲ ಸಂದರ್ಭದಲ್ಲಿ ಕಾಲೇಜು ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಕಾಲೇಜು ಪ್ರಾಂಶುಪಾಲರಾದ ನೀಮ ಕಾರ್ಡೂಜಾ ತಿಳಿಸಿದರು
ತಂಡದಲ್ಲಿ ಸಮೀಕ್ಷ, ಸೌಜನ್ಯ, ಕೇಶವರಿ, ಮಾನ್ವಿ, ವೈಷ್ಣವಿ, ಶ್ರೇಯ, ಪೃಥ್ವಿ, ಅನನ್ಯ, ಮನವಿ, ತರಬೇತುದಾರರಾದ ಕಿಶೋರ್ ಶೆಟ್ಟಿ, ಕಾವ್ಯ ಇದ್ದರು
ವರದಿ:ಪುನೀತ್ ಕಡಿದಾಳು
9483811948
