ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಮುತ್ತಿಗೆಪುರದಲ್ಲಿ ಕಾಫಿ ಬೆಳಗಾರನ ಮನೆ ಮೇಲೆ ಗುಂಡು ಹಾರಿಸಲಾಗಿದೆ. ಫೈರಿಂಗ್ನಿಂದ ಜೀವ ಭಯದಲ್ಲಿರೋ ಮನೆ ಮಾಲೀಕ ವಿಂಧನ್, ಹತ್ಯೆ ಮಾಡುವ ಉದ್ದೇಶದಿಂದಲೇ ಗುಂಡು ಹಾರಿಸಲಾಗಿದೆ ಅಂತಾ ದೂರಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಅದ್ರಲ್ಲೂ ಬಿಜೆಪಿ ಎಸ್ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಿತ್ ಆಂಡ್ ಟೀಂ ವಿರುದ್ಧ ಆರೋಪ ಮಾಡಿದ್ದಾರೆ. ಅವರೇ ಫೈರಿಂಗ್ ಮಾಡಿದ್ದಾರೆ ಅಂತಾ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.

ನವೆಂಬರ್ 20 ರಂದು ತಾಯಿ ಜೊತೆ ಮನೆಯಲ್ಲಿದ್ದಾಗ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ಎಂಟ್ರಿ ಕೊಟ್ಟಿದ್ರು ಅಂತಾ ವಿಂಧನ್ ಆರೋಪಿಸಿದ್ದಾರೆ. ಸಂಬಂಧಪಟ್ಟ ಸಿಸಿಟಿವಿ ದೃಶ್ಯ ರಿಲೀಸ್ ಮಾಡಿದ್ದಾರೆ. ಬೈಕ್ನಲ್ಲಿ ಬಂದಿದ್ದ ಒಬ್ಬಾತ, ಮನೆ ಮುಂದಿನ ರಸ್ತೆಯಲ್ಲಿ ಬೈಕ್ನಲ್ಲಿ ಸುತ್ತಾಡಿ ನಂತರ ತೆರಳಿದ್ದು, ದೂರದಿಂದ ಅದೇ ಟೀಂ ಗುಂಡು ಹಾರಿಸಿದೆ ಅನ್ನೋದು ವಿಂಧನ್ ಆರೋಪ. ಬಂದೂಕುಧಾರಿಗಳು ಹಾರಿಸಿದ್ದಾರೆ ಎನ್ನಲಾದ ಗುಂಡು ಮನೆಯ ಪಿಲ್ಲರ್ಗೆ ತಾಗಿದ್ದು, ವಿಂಧನ್ ಪ್ರಾಣಾಪಾಯದಿಂದ ಪಾರಾಗಿದ್ದಾರಂತೆ.
ಎಫ್ಐಆರ್ ದಾಖಲಾಗ್ತಿದ್ದಂತೆ ದೂರು ಹಿಂಪಡೆಯುವಂತೆ ವಿಂಧನ್ ಮೇಲೆ ಕೆಲ ಲೀಡರ್ಸ್ ಒತ್ತಡ ಹಾಕ್ತಿದ್ದಾರೆ ಎನ್ನಲಾಗಿದ್ದು, ಎಸ್ಪಿ ಸೂಚನೆ ಮೇರೆಗೆ FIR ದಾಖಲಾಗಿದೆ ಅಂತಾನೂ ಹೇಳಲಾಗ್ತಿದೆ.
ಒಟ್ಟಿನಲ್ಲಿ ದುಷ್ಕರ್ಮಿಗಳು ಟಾರ್ಗೆಟ್ ಮಾಡಿ ಫೈರಿಂಗ್ ಮಾಡಿದ್ರಾ? ಅಥವಾ ಬೇಟೆಗಾರರ ಬಂದೂಕಿನಿಂದ ಹಾರಿದ ಬುಲೆಟ್ಟಾ ಅನ್ನೋದು ತನಿಖೆಯಲ್ಲಿ ಗೊತ್ತಾಗಬೇಕಿದೆ.
ಪುನೀತ್ ಕಡಿದಾಳು, ಪಬ್ಲಿಕ್ ಇಂಪ್ಯಾಕ್ಟ್, ಮೂಡಿಗೆರೆ
