ಬೆಂಗಳೂರು: ಮೂಡಿಗೆರೆ ಭಾಗಕ್ಕೆ ಆನೆಗಳ ಡ್ರೈವ್ ಮಾಡ್ತಿರೋದಕ್ಕೆ ಶಾಸಕಿ ನಯನ ಕೆಂಡಮಂಡಲರಾಗಿ ಖಡಕ್ ಸ್ಟೆಪ್ ತೆಗೆದುಕೊಂಡಿದ್ದಾರೆ. ನುಡಿದಂತೆ ನಡೆದು ರಾಜೀನಾಮೆಗೆ ಮುಂದಾಗಿದ್ದಾರೆ. ರಿಸೈನ್ ಲೆಟರ್ ಹಿಡಿದು ವಿಧಾನಸಭೆಯ ಸಭಾಪತಿ ಕಚೇರಿಗೆ ಆಗಮಿಸಿದ್ರು. ಭಾನುವಾರವಷ್ಟೇ ಚಿಕ್ಕಮಗಳೂರಿನಲ್ಲಿ ಪ್ರೆಸ್ಮೀಟ್ ಮಾಡಿದ್ದ ಶಾಸಕಿ ನಯನ, ಆಕ್ರೋಶ ಹೊರ ಹಾಕಿದ್ರು. ಮೂಡಿಗೆರೆ ಕಡೆಗೆ ಕಾಡಾನೆಗಳನ್ನ ಅಟ್ಟಿದ್ದಕ್ಕೆ ಆಕ್ರೋಶ ಹೊರ ಹಾಕಿದ್ರು,. ಹಾಸನದ ಜನರ ಜೀವದ ಬೆಲೆ ಜಾಸ್ತಿನಾ ಅಂತಾ ಪ್ರಶ್ನಿಸಿದ್ರು, ಚಿಕ್ಕಮಗಳೂರಿನ ಜನರ ಜೀವನ ಮೌಲ್ಯ ಕಡಿಮೆನಾ ಅಂತಾ ಕಿಡಿಕಾರಿದ್ರು. ಅಲ್ಲದೆ, ಸರ್ಕಾರದಿಂದ ನಾವಲ್ಲ.. ಜನರಿಂದ ಸರ್ಕಾರ. ನನಗೆ ಕ್ಷೇತ್ರದ ಜನರೇ ಮುಖ್ಯ. ಆನೆಗಳನ್ನ ಮೂಡಿಗೆರೆಯಿಂದ ಓಡಿಸದಿದ್ದರೆ ರಾಜೀನಾಮೆ ನೀಡೋದಾಗಿ ನಿನ್ನೆ ನಯನ ಎಚ್ಚರಿಕೆ ನೀಡಿದ್ರು. ತಮ್ಮ ಮಾತನ್ನ ಅನುಸರಿಸಿ ಸ್ಥಾನ ತ್ಯಜಿಸಲು ಇಂದು ಸಭಾಪತಿ ಕಚೇರಿಗೆ ಆಗಮಿಸಿದ್ರು,.
ಈಗಾಗಲೇ ಸ್ಥಳಾಂತರ ಮಾಡಲಾಗಿರುವ ಆನೆಗಳನ್ನು ವಾಪಸ್ ಓಡಿಸಿಕೊಂಡು ಹೋಗಬೇಕು ಇಲ್ಲವಾದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾನುವಾರ (ನವೆಂಬರ್ 22) ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ಹೇಳಿದ್ದರು. ಅದರಂತೆ ಇಂದು (ನವೆಂಬರ್ 23) ನಯನಾ ಮೋಟಮ್ಮ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನಸೌಧದ ಸ್ಪೀಕರ್ ಕಚೇರಿಗೆ ತೆರಳಿದ್ದಾರೆ. ಆದ್ರೆ, ಸ್ಪೀಕರ್ ಇಲ್ಲದಿದ್ದರಿಂದ ಅವರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
ನಯನಾರ ರಾಜೀನಾಮೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ಆದ್ರೆ ಶಾಸಕಿ ರಾಜೀನಾಮೆ ಸಲ್ಲಿಸ್ತಾರಾ? ಅಥವಾ ತಮ್ಮ ಮುಂದಿನ ನಡೆ ಏನು ಅನ್ನೋದು ಕ್ಯೂರಿಯಾಸಿಟಿಗೂ ಕಾರಣವಾಗಿದೆ
