ಬಾಳೆಹೊನ್ನೂರು: ಹಾಸನ ಹಾಗೂ ಬೇಲೂರು ಭಾಗದಿಂದ ಭದ್ರಾ ಅಭಯಾರಣ್ಯಕ್ಕೆ 56 ಕಾಡಾನೆಗಳ ಸ್ಥಳಾಂತರ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ರೈತರು,ಗ್ರಾಮಸ್ಥರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಈಗ ಈ ಆದೇಶಕ್ಕೆ ಕಾಫಿ ಗಿರೀಶ್ ಹುಯಿಗೆರೆ ಕೂಡ ತಮ್ಮ ವಿರೋಧ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ನೀಡಿದ್ದು, ಈ ಸಂಬಂಧ ಜಾಗರ ಹೋಬಳಿ ಗ್ರಾಮಸ್ಥರು ನಡೆಸುತ್ತಿರುವ ರಸ್ತೆ ತಡೆ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಸರ್ಕಾರ ಈ ಕೂಡಲೇ ಆನೆ ಸ್ಥಳಾಂತರ ಕಾರ್ಯಾಚರಣೆ ನಿಲ್ಲಿಸಬೇಕು ಇಲ್ಲವಾದಲ್ಲಿ ಖಾಂಡ್ಯ ಹಾಗೂ ಜಾಗರ ಹೋಬಳಿ ಸಮಸ್ತ ರೈತರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕಾಫಿ ಗಿರೀಶ್ ತಿಳಿಸಿದ್ದಾರೆ.
