Monday, November 23, 2026
Homeಜಿಲ್ಲಾಸುದ್ದಿಮಲೆನಾಡಿನಲ್ಲಿ ಮುಂದುವರೆದ ಗೋವು ಕಳ್ಳತನ; ಕೊಟ್ಟಿಗೆಯಿಂದಲೇ ಗೋವು ಕಳವು!

ಮಲೆನಾಡಿನಲ್ಲಿ ಮುಂದುವರೆದ ಗೋವು ಕಳ್ಳತನ; ಕೊಟ್ಟಿಗೆಯಿಂದಲೇ ಗೋವು ಕಳವು!

Telegram Group
Join Now

ನರಸಿಂಹರಾಜಪುರ: ತಾಲೂಕಿನ ಕರ್ಕೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಸೇಕೊಪ್ಪದಲ್ಲಿ 19/11/2026 ರ ರಾತ್ರಿ ಸುಮಾರು12 ಹೊತ್ತಿನಲ್ಲಿ ಕೊಟ್ಟಿಗೆಗೆ ನುಗ್ಗಿದ ಮೂವರು ಗೋ ಕಳ್ಳರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಹೋರಿಯನ್ನು ಕಾರಿನಲ್ಲಿ ಹಾಕಿಕೊಂಡು ಕಳವು ಮಾಡಿದ ಬಗ್ಗೆ ದೂರು ದಾಖಲಾಗಿದೆ.

ಇದಲ್ಲದೇ ಹದಿನೈದು ದಿನದ ಹಿಂದೆಯೂ ಹುಣಸೇಕೊಪ್ಪ ಬಳಿ ಹಸುವೊಂದನ್ನು ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.

ರಸ್ತೆ ಬದಿಯಲ್ಲಿ ಕಳ್ಳತನ ಮಾಡುತ್ತಿದ್ದ ಗೋ ಕಳ್ಳರು ಈಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಕಳ್ಳತನ ಮಾಡಿದ್ದರಿಂದ ಗೋವು ಸಾಕುವವರು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.

ಕಳ್ಳತನ ಮಾಡಿರುವ ಹೋರಿಯನ್ನು ನಮಗೆ ದೊರಕಿಸಿ, ಕಳವು ಮಾಡಿದ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದು, ಪೋಲಿಸರು ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!