ಜಯಪುರ: ಶಾಸಕರ ಮೇಲಿನ ಬೇಸರ, ಅನುದಾನದ ಕೊರತೆ ತಕ್ಕ ಗೌರವ ಸಿಕ್ಕಿಲ್ಲ ಎಂದು ರಾಜೀನಾಮೆಗೆ ಮುಂದಾಗಿದ್ದ ಜಲದುರ್ಗ ಬೂತ್ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಮೇಗುಂದ ಹೋಬಳಿ ಅಧ್ಯಕ್ಷರಾದ ಪ್ರವೀಣ್ ಜಾಲ್ಮರ ಮಧ್ಯಸ್ಥಿಕೆಯಲ್ಲಿ ರಾಜೀನಾಮೆ ಹಿಂಪಡೆದು ಮತ್ತೆ ಪಕ್ಷಕ್ಕಾಗಿ ದುಡಿಯುವ ಭರವಸೆ ನೀಡಿದ್ದಾರೆ.
ನಮ್ಮ ನಿರ್ಧಾರದಿಂದ ಯಾರಿಗಾದರು ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
