ಬೆಂಗಳೂರು: ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟ 10ನೇ ದಿನಕ್ಕೆ ಕಾಲಿಟ್ಟಿದೆ ಗೌರವ ಧನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಮಧ್ಯೆ ಸಚಿವ ಯು.ಟಿ. ಖಾದರ್ ಅವರು ಬೇಜವಾಬ್ದಾರಿಯುತ ಹೇಳಿಕೆ ನೀಡಿ ಸರ್ಕಾರದ ಮಾನ ಮಾರ್ಯಾದೆ ತೆಗೆಯುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಹೌದು .. ಸಚಿವ ಯು.ಟಿ. ಖಾದರ್ ಅವರು ಆಶಾ ಕಾರ್ಯಕರ್ತೆಯರ ಬಗ್ಗೆ ಆಶಾಗಳ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ. 10 ದಿನ ಪ್ರತಿಭಟನೆ ಆಗಿದೆ, ಆರೋಗ್ಯ ಇಲಾಖೆ ಏನು ಸಮಸ್ಯೆಗೆ ಸಿಲುಕಿದೆಯಾ? ಇಲ್ಲ ತಾನೇ? ಹಳ್ಳಿಗಳಲ್ಲಿ ಏನಾದ್ರು ಸಮಸ್ಯೆ ಆಗಿದೆಯಾ? ಇಲ್ಲ ಎಂದು ಖಾದರ್ ಮಾತನಾಡಿದ್ದಾರೆ.
ಹಾಗೆ ಆಶಾಗಳ ಸೇವೆ ಇಲ್ಲ ಅಂದ್ರೂ ಆರೋಗ್ಯ ಇಲಾಖೆ ನಡೆಯುತ್ತೆ. ಅದನ್ನ ಆಶಾಗಳೇ ತೋರಿಸಿ ಕೊಟ್ಟಿದ್ದಾರೆ. ಪ್ರತಿಭಟನೆಯಿಂದ ರಾಜ್ಯದಲ್ಲಿ ಏನು ಸಮಸ್ಯೆ ಆಗಿಲ್ಲ. ಹೆರಿಗೆ ಆಗ್ತಿದೆ, ಎಲ್ಲಾ ಆಗ್ತಿದೆ ಎಂದಿದ್ದಾರೆ.
ಇದೀಗ ಇದರ ಬೆನ್ನಲ್ಲೇ ಆರೋಗ್ಯ ಸಚಿವ ಯು.ಟಿ. ಖಾದರ್ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಚಿವ ಖಾದರ್ ಅವರ ಹೇಳಿಕೆಯಿಂದ ಉಂಟಾದ ಮುಜುಗರವನ್ನು ತಪ್ಪಿಸಲು ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಆಶಾ ಕಾರ್ಯಕರ್ತೆಯರು ಬೇಡ ಎಂಬುದೆಲ್ಲ ಸುಳ್ಳು, ನಮಗೆ ಎಲ್ಲರೂ ಬೇಕು” ಎಂದು ಸ್ಪಷ್ಟನೆ ನೀಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
