Wednesday, November 25, 2026
Homeಗ್ರೇಟರ್ ಬೆಂಗಳೂರುElephant Conflict: ಕಾಡಾನೆಗಳ ಶಿಫ್ಟಿಂಗ್‌ ವಿಚಾರ: ರಾಜೀನಾಮೆಯಿಂದ ಹಿಂದೆ ಸರಿದ ಚಿಕ್ಕಮಗಳೂರಿನ ಮೂವರು ಶಾಸಕರು!

Elephant Conflict: ಕಾಡಾನೆಗಳ ಶಿಫ್ಟಿಂಗ್‌ ವಿಚಾರ: ರಾಜೀನಾಮೆಯಿಂದ ಹಿಂದೆ ಸರಿದ ಚಿಕ್ಕಮಗಳೂರಿನ ಮೂವರು ಶಾಸಕರು!

Telegram Group
Join Now

ಬೆಂಗಳೂರು: ಹಾಸನದ ಬೇಲೂರು ಭಾಗದಿಂದ ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಭದ್ರಾ ಅಭಯಾರಣ್ಯ ಭಾಗಕ್ಕೆ ಕಾಡಾನೆಗಳನ್ನು ಅಟ್ಟಿರುವುದಕ್ಕೆ ಅಸಮಾಧಾನಗೊಂಡಿದ್ದ ಚಿಕ್ಕಮಗಳೂರಿನ ಮೂವರು ಶಾಸಕರು ರಾಜೀನಾಮೆಯ ಪ್ರಹಸನ ನಡೆಸಿದ್ದರು.ಆದರೆ ಇದೀಗ  ಆದರೆ ರಾಜ್ಯ ಸರ್ಕಾರ ಕಾರ್ಯಾಚರಣೆ ನಿಲ್ಲಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಶಾಸಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಆನೆಗಳನ್ನು ಚಿಕ್ಕಮಗಳೂರು ಭಾಗಕ್ಕೆ ಅಟ್ಟಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಇದೇ ವಿಚಾರವಾಗಿ ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ  ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಅವರು ಸ್ಪೀಕರ್‌ ಜಿ.ಎಸ್ ಪಾಟೀಲ್ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ನಡೆದ ಚರ್ಚೆ ಬಳಿಕ ರಾಜೀನಾಮೆ ನಿರ್ಧಾರದಿಂದ ಶಾಸಕರು ಹಿಂದೆ ಸರಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!