Wednesday, November 25, 2026
Homeಗ್ರೇಟರ್ ಬೆಂಗಳೂರುMidDay Meal Workers Protest: ಕ್ಲಸ್ಟರ್ ಕಿಚನ್ ಯೋಜನೆ ವಿರೋಧಿಸಿ ಬಿಸಿಯೂಟ ಕಾರ್ಯಕರ್ತೆಯರಿಂದ ಆಕ್ರೋಶ: ಸರ್ಕಾರದ...

MidDay Meal Workers Protest: ಕ್ಲಸ್ಟರ್ ಕಿಚನ್ ಯೋಜನೆ ವಿರೋಧಿಸಿ ಬಿಸಿಯೂಟ ಕಾರ್ಯಕರ್ತೆಯರಿಂದ ಆಕ್ರೋಶ: ಸರ್ಕಾರದ ತಲೆ ಬಿಸಿ ಹೆಚ್ಚಿಸಿದ ಧರಣಿ!

Telegram Group
Join Now

ಬೆಂಗಳೂರು: ಆಶಾ ಕಾರ್ಯಕರ್ತೆಯರ ಹೋರಾಟದ ಬೆನ್ನಲ್ಲೇ ಈಗ ಬಿಸಿ ಊಟ ತಯಾರಕರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ ಬಳಿ ಜಮಾಯಿಸಿದ ಬಿಸಿಯೂಟ ತಯಾರಕರು ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ಕ್ಲಸ್ಟರ್ ಕಿಚನ್ ವ್ಯವಸ್ಥೆ ರದ್ದು, ಗೌರವಧನ ಪದ್ಧತಿ ತೆಗೆದುಹಾಕಿ ಕನಿಷ್ಠ ವೇತನ ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ. ರಸ್ತೆ ಮಧ್ಯೆ ಕುಳಿತು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆನೂ ಮಾಡ್ತಿದ್ದಾರೆ. ಆಶಾ ವರ್ಕರ್ಸ್‌ ಬೇಡಿಕೆ ಈಡೇರಿಸಲು ಒದ್ದಾಡ್ತಿರೋ ಡಿಕೆಶಿ ಸರ್ಕಾರಕ್ಕೆ ಬಿಸಿಯೂಟ ತಯಾರಕರ ಪ್ರತಿಭಟನೆ ಹೊಸ ತಲೆ ನೋವಾಗಿ ಪರಿಣಮಿಸಿದೆ.

ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವುದನ್ನು ವಿರೋಧಿಸಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳು ಹಾಗೂ ಸಂಘಟನೆಗಳಿಗೆ ವಹಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಶಿಕ್ಷಕರು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!