Thursday, November 26, 2026
Homeಜಿಲ್ಲಾಸುದ್ದಿಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶೆರ್ವಿನ್ ವಿಲಿಯಮ್ಸ್ – ರೋಟರಿ ಬೆಂಗಳೂರು ಜೆ.ಪಿ. ನಗರ ಸಂಸ್ಥೆಯ ಮಹತ್ವದ...

ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶೆರ್ವಿನ್ ವಿಲಿಯಮ್ಸ್ – ರೋಟರಿ ಬೆಂಗಳೂರು ಜೆ.ಪಿ. ನಗರ ಸಂಸ್ಥೆಯ ಮಹತ್ವದ ಕೊಡುಗೆ

Telegram Group
Join Now

ಮೂಡಿಗೆರೆ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಶೆರ್ವಿನ್ ವಿಲಿಯಮ್ಸ್ ಸಂಸ್ಥೆ ಮತ್ತು ರೋಟರಿ ಬೆಂಗಳೂರು ಜೆ.ಪಿ. ನಗರ ಸಂಸ್ಥೆಯ ವತಿಯಿಂದ ಮೂಡಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಿಕಾ ಶಾಲೆಗೆ ವಿವಿಧ ಅಗತ್ಯ ಸೌಲಭ್ಯಗಳನ್ನು ಕೊಡುಗೆಯಾಗಿ ನೀಡಲಾಗಿದೆ.

ಶೆರ್ವಿನ್ ವಿಲಿಯಮ್ಸ್ ಸಂಸ್ಥೆಯ CSR ಯೋಜನೆಯಡಿ ರೋಟರಿ ಬೆಂಗಳೂರು ಜೆ.ಪಿ. ನಗರ ಸಂಸ್ಥೆಯ ಸಹಯೋಗದೊಂದಿಗೆ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ, ಕಂಪ್ಯೂಟರ್, ಪ್ರಿಂಟರ್, ಗ್ರಂಥಾಲಯದ ಕಪಾಟುಗಳು, ಡೆಸ್ಕ್‌ಗಳು, ಟೇಬಲ್‌ಗಳು ಹಾಗೂ ಕುರ್ಚಿಗಳನ್ನು ಒದಗಿಸಲಾಗಿದೆ.

ಈ ಕೊಡುಗೆಯು ಕೇವಲ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಸೀಮಿತವಾಗಿರದೆ, ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ, ಜ್ಞಾನಾರ್ಜನೆ ಹಾಗೂ ಶೈಕ್ಷಣಿಕ ಪ್ರಗತಿಗೆ ಹೊಸ ಉತ್ತೇಜನ ನೀಡಲಿದೆ. ವಿಶೇಷವಾಗಿ ಡಿಜಿಟಲ್ ಶಿಕ್ಷಣ, ಗ್ರಂಥಾಲಯದ ಬಳಕೆ ಮತ್ತು ಉತ್ತಮ ಕಲಿಕಾ ವಾತಾವರಣ ನಿರ್ಮಾಣಕ್ಕೆ ಈ ಸೌಲಭ್ಯಗಳು ಸಹಕಾರಿಯಾಗಲಿವೆ.

ಈ ಮಹತ್ವದ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿ ಸರ್ಕಾರಿ ಶಾಲೆಯ ಮಕ್ಕಳ ಭವಿಷ್ಯಕ್ಕೆ ಬೆಂಬಲ ನೀಡಿದ ಶೆರ್ವಿನ್ ವಿಲಿಯಮ್ಸ್ ಸಂಸ್ಥೆಯ ಹಿರಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ಶ್ರೀ ರತನ್ ರೈ ಅವರಿಗೆ ಶಾಲೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಅದೇ ರೀತಿ, ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ರೋಟರಿ ಬೆಂಗಳೂರು ಜೆ.ಪಿ. ನಗರ ಸಂಸ್ಥೆಯ ಅಧ್ಯಕ್ಷರಾದ ರೋ. ಸುರೇಶ್ ರಾಬರ್ಟ., ರೋ. ರವಿ ಜಿ.ಎಂ., ಹಾಗೂ ರೋ. ಶ್ರೀನಿವಾಸನ್ ಅವರ ಸೇವೆ ಮತ್ತು ಸಮರ್ಪಣೆಯನ್ನು ಶಾಲೆಯು ಕೃತಜ್ಞತೆಯಿಂದ ಸ್ಮರಿಸುತ್ತದೆ.

ಶಿಕ್ಷಣಕ್ಕೆ ನೀಡುವ ಪ್ರತಿಯೊಂದು ಕೊಡುಗೆಯೂ ಒಂದು ಉತ್ತಮ ಭವಿಷ್ಯಕ್ಕೆ ಹಾಕುವ ಭದ್ರ ಬುನಾದಿಯಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳು ಇನ್ನಷ್ಟು ಸಂಸ್ಥೆಗಳಿಗೆ ಪ್ರೇರಣೆಯಾಗಲಿ ಹಾಗೂ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ದಾರಿಯಾಗಲಿ ಎಂಬುದು ನಮ್ಮ ಆಶಯ.

ಮಕ್ಕಳ ಶಿಕ್ಷಣಕ್ಕಾಗಿ ಕೈಜೋಡಿಸಿದ ಎಲ್ಲಾ ದಾನಿಗಳು, ಸಂಸ್ಥೆಗಳು ಹಾಗೂ ಸೇವಾ ಮನೋಭಾವದ ವ್ಯಕ್ತಿಗಳಿಗೆ ಶಾಲೆಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!