Thursday, November 26, 2026
Homeಕ್ರೈಮ್ಬೇಲೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಪುಂಡಾಟಿಕೆ: ನಡುರಸ್ತೆಯಲ್ಲೇ ಕಾರಿಗೆ ಒದ್ದು ಅಟ್ಟಹಾಸ!

ಬೇಲೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಪುಂಡಾಟಿಕೆ: ನಡುರಸ್ತೆಯಲ್ಲೇ ಕಾರಿಗೆ ಒದ್ದು ಅಟ್ಟಹಾಸ!

Telegram Group
Join Now

ಬೇಲೂರು: ಐತಿಹಾಸಿಕ ಬೇಲೂರಿನ ನೆಹರು ವೃತ್ತದ ಬಳಿ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ನಡುರಸ್ತೆಯಲ್ಲೇ ಕಾರಿಗೆ ಒದ್ದು ಪುಂಡಾಟಿಕೆ ಮೆರೆದಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರು ಮುಂದೆ ಸಾಗುತ್ತಿದ್ದ ವೇಳೆ ಮೂವರು ಯುವಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿದ್ಯಾರ್ಥಿಗಳೇ, ಪುಸ್ತಕ ಹಿಡಿಯಬೇಕಾದ ಕೈಗಳಲ್ಲಿ ಪುಂಡಾಟಿಕೆ ಶೋಭೆಯಲ್ಲ. ಸಾರ್ವಜನಿಕ ರಸ್ತೆ ನಿಮ್ಮ ರೌಡಿಸಂ ಅಖಾಡವಲ್ಲ.ಇಂದು ಪ್ರಾಣ ಉಳಿದಿದೆ. ಆದರೆ ಇಂತಹ ಅತಿರೇಕ ನಾಳೆ ಅಮಾಯಕರ ಜೀವಕ್ಕೆ ಕುತ್ತು ತರಬಹುದು.

ಇನ್ನಾದರೂ ಪೊಲೀಸ್ ಇಲಾಖೆ ಇಂತಹ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕಾನೂನಿನ ಪಾಠ ಕಲಿಸಬೇಕಿದೆ. ಸಾರ್ವಜನಿಕರ ಸುರಕ್ಷತೆಗೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವುದು ಅತ್ಯಗತ್ಯ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!