ಬೆಂಗಳೂರು: ಮನೆಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಸಂತ್ರಸ್ತೆ ಕಿಡ್ನ್ಯಾಪ್ ಆರೋಪ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿರುವ ರೇವಣ್ಣ ಕಸ್ಟಡಿ ಇಂದು ಅಂತ್ಯವಾಗಲಿದೆ. ಇಂದು ಮಧ್ಯಾಹ್ನ ಮೂರು ಗಂಟೆ ನಂತರ ರೇವಣ್ಣರನ್ನು ಕೋರ್ಟ್‌ಗೆ ಹಾಜರುಪಡಿಸಲಿರುವ ಸಾಧ್ಯತೆ ಇದೆ. ಕೋರ್ಟ್ ವಿಚಾರಣೆ ನಡೆಸಿ ರೇವಣ್ಣಗೆ ಜಾಮೀನು ನೀಡುತ್ತಾ ಅಥವಾ ಜೈಲು ಶಿಕ್ಷೆ ನೀಡುತ್ತಾ ಕಾದು ನೋಡಬೇಕಿದೆ.
ಕೆ.ಆರ್. ನಗರದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ1 ಆರೋಪಿಯಾಗಿರುವ ರೇವಣ್ಣರನ್ನು ನಾಲ್ಕು ದಿನ ಎಸ್ಐಟಿ ವಶಕ್ಕೆ ಪಡೆದಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈಗಾಗಲೇ ಎಸ್‌ಐಟಿ ವಿಚಾರಣೆ ಮುಗಿದಿದ್ದು ಮತ್ತೆ ತನ್ನ ಕಸ್ಟಡಿಗೆ ಆರೋಪಿಯನ್ನು ಕೇಳುವ ಸಾಧ್ಯತೆ ಕಮ್ಮಿ ಇದೆ. ಒಂದು ವೇಳೆ ಜಾಮೀನು ಸಿಗದೇ ಹೋದ್ರೆ ರೇವಣ್ಣ ಪರಪ್ಪನ ಅಗ್ರಹಾರಕ್ಕೆ ಹೋಗಲಿದ್ದಾರೆ.