Tuesday, August 11, 2026
Homeಕ್ರೈಮ್ಮಂಗಳೂರು; ಮೆಡಿಕಲ್ ಕಾಲೇಜಿನ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿದ ಅಪ್ರಾಪ್ತ; ಮೊಬೈಲ್ ರಿಂಗ್...

ಮಂಗಳೂರು; ಮೆಡಿಕಲ್ ಕಾಲೇಜಿನ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿದ ಅಪ್ರಾಪ್ತ; ಮೊಬೈಲ್ ರಿಂಗ್ ಆಗುತ್ತಿದ್ದಂತೆ ಸಿಕ್ಕಿ ಬಿದ್ದ ಆರೋಪಿ

Telegram Group
Join Now

ಮಂಗಳೂರು; ಮೆಡಿಕಲ್ ಕಾಲೇಜಿನ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿದ ಅಪ್ರಾಪ್ತ ಮೊಬೈಲ್ ರಿಂಗ್ ಆಗುತ್ತಿದ್ದಂತೆ ಸಿಕ್ಕಿ ಬಿದ್ದ ಘಟನೆ ಮಂಗಳೂರಿನ ಲೈಟ್ ಹೌಸ್ ಹಿಲ್ ರೋಡ್ ಬಾವುಟಗುಡ್ಡೆಯಲ್ಲಿರುವ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

ಅಪ್ರಾಪ್ತ ಮೇ 6 ರಂದು  ಸಂಜೆ 3.30 ವೇಳೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ 1ನೇ ಮಹಡಿಯಲ್ಲಿರುವ ಲೇಡಿಸ್ ಟಾಯ್ಲೆಟ್ ನ ಎಕ್ಸಾಸ್ಟ್ ಫ್ಯಾನ್ ಬಳಿ ಮೊಬೈಲ್ ಪೋನ್ ಇಟ್ಟು ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಮೊಬೈಲ್ ರಿಂಗ್ ಆಗಿದೆ. ಕೂಡಲೇ  ಭದ್ರತಾ ಸಿಬ್ಬಂದಿ ಹೋಗಿ ಪರಿಶೀಲಿಸಿದಾಗ ಟಾಯ್ಲೆಟ್ ನಲ್ಲಿ ಯಾರೂ ಇರಲಿಲ್ಲ. ಅಲ್ಲದೆ ಮೊಬೈಲ್ ನ್ನು ಎಕ್ಸಾಸ್ಟ್ ಫ್ಯಾನ್ ಬಳಿ ಇಡಲಾಗಿದ್ದು ಗೊತ್ತಾಗಿದೆ. ಟಾಯ್ಲೆಟ್ ಗೆ ಬರುವ ಮಹಿಳೆಯರ ದೃಶ್ಯ ಸೆರೆ ಮಾಡಲು ಇರಿಸದ ಸ್ಥಿತಿಯಲ್ಲಿ ಮೊಬೈಲ್ ಕಂಡು ಬಂದಿದೆ.ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸರು 17 ವರ್ಷದ ಅಪ್ರಾಪ್ತ ಯುವಕನನ್ನು ಬಂಧಿಸಿದ್ದಾರೆ. ಮೇ 06ರಂದು ಮೆಡಿಕಲ್ ಕಾಲೇಜಿಗೆ ರೋಗಿಯಂತೆ ಬಂದಿದ್ದ ಅಪ್ರಾಪ್ತ ಯುವಕ ಲೇಡಿಸ್ ಟಾಯ್ಲೆಟ್​ಗೆ ಹೋಗಿ ಮೊಬೈಲ್ ಇಟ್ಟಿದ್ದ. ತದನಂತರ ಲೇಡಿಸ್ ಟಾಯ್ಲೆಟ್ ಒಳಗಿನಿಂದ ಮೊಬೈಲ್ ರಿಂಗ್ ಆದ ಸದ್ದು ಕೇಳಿಸಿದ್ದು ಪರಿಶೀಲನೆ ಮಾಡಿದಾಗ ಮೊಬೈಲ್ ಪತ್ತೆಯಾಗಿದೆ. ಮೊಬೈಲ್ ಸಿಕ್ಕ ಬಳಿಕ ಕಾಲೇಜು ಸಿಬ್ಬಂದಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಾಲೇಜಿನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹದಿನೇಳು ವರ್ಷದ ಅಪ್ರಾಪ್ತ ಯುವಕನನ್ನು ಬಂಧಿಸಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments