ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟುವಿನ ನಡುರಸ್ತೆಯಲ್ಲೇ ಮೇ 19ರಂದು ನಡೆದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

.ಉಡುಪಿ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಜೀದ್, ಅಲ್ಫಾಜ್ ,ಶರೀಫ್ ನನ್ನು ಬಂಧಿಸಿದ್ದಾರೆ.ಹೊಡೆದಾಟದ ವೇಳೆ ಶರೀಫ್ ತೀವ್ರವಾಗಿ ಗಾಯಗೊಂಡಿದ್ದ.ಮೇ 19ರಂದು ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಗ್ಯಾಂಗ್ ವಾರ್ ನಡೆದಿತ್ತು.ಅಡ್ಡಾಡಿದ್ದಿ ಕಾರು ಚಲಾಯಿಸಿ ಡಿಕ್ಕಿ ಹೊಡೆದು, ತಲವಾರು ಬೀಸಿ ಭಯ ಹುಟ್ಟಿಸಿದ್ದ ಪ್ರಕರಣ ಇದಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು. ಆಶಿಕ್ , ರಖೀಬ್ ಹಾಗೂ ಸಕ್ಲೈನ್ ನನ್ನು ನಿನ್ನೆ ಬಂಧಿಸಿದ್ದರು. ಇದೀಗ ಮತ್ತೆ ಮೂವರನ್ನು ಬಂಧಿಸಿದ್ದು ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
