Saturday, August 8, 2026
Homeಹೊರರಾಜ್ಯಗ್ಯೂಗಲ್ ಮ್ಯಾಪ್ ನೋಡಿ ಹೋಗಿ ಹಳ್ಳಕ್ಕೆ ಬಿದ್ದ ಕಾರು

ಗ್ಯೂಗಲ್ ಮ್ಯಾಪ್ ನೋಡಿ ಹೋಗಿ ಹಳ್ಳಕ್ಕೆ ಬಿದ್ದ ಕಾರು

Telegram Group
Join Now

ಕೇರಳ ; ಗ್ಯೂಗಲ್ ಮ್ಯಾಪ್ ನಂಬಿ ಹೋದ ಕಾರೊಂದು ಹೋಗಿ ಹಳ್ಳಕ್ಕೆ ಬಿದ್ದ ಘಟನೆ ಕೇರಳದ ಕುರುಪ್ಪಂಥಾರ ಬಳಿ ನಡೆದಿದೆ.ಹೈದರಾಬಾದ್ ನ ಪ್ರವಾಸಿದರು ಗೂಗಲ್ ಮ್ಯಾಪ್  ನಂಬಿ ಕಾರನ್ನು ಸೀದಾ ನೀರು ತುಂಬಿದ್ದ ತೊರೆಯೊಂದಕ್ಕೆ ನುಗ್ಗಿಸಿದ್ದಾರೆ.ಪ್ರವಾಸಿಗರು ಮುನ್ನಾರ್‌ನಿಂದ ಕೇರಳದ ಅಲಪ್ಪುಳಕ್ಕೆ ಹೊರಟಿದ್ದರು. ಆದರೆ ಮ್ಯಾಪ್ ದಾರಿ ತಪ್ಪಿಸಿದ ಕಾರಣ ದಕ್ಷಿಣ ತೊರೆಗೆ ವಾಹನ ಬಿದ್ದಿದೆ. ಅದೃಷ್ಟವಶಾತ್ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಕೇರಳ ಪ್ರವಾಸಕ್ಕೆ ಬಂದಿದ್ದ ತಂಡ ಮುನ್ನಾರ್‌ನಿಂದ ಅಲಪ್ಪುಳಕ್ಕೆ ಹೊರಟಿದ್ದರು. ಅಪರಿಚಿತ ಊರಾಗಿದ್ದ ಕಾರಣ ಗೂಗಲ್ ಮ್ಯಾಪ್ ಸಹಾಯದಿಂದ ಪ್ರಯಾಣಿಸುತ್ತಿದ್ದರು. ಆದರೆ ಈ ವೇಳೆ ಕೇರಳದಲ್ಲಿ ಏಕಾಏಕಿ ಮಳೆ ಆರಂಭವಾಗಿದ್ದು, ಭಾರೀ ಮಳೆಯಿಂದ ರಸ್ತೆಗಳು ಜಲಾವೃತವಾದವು. ಆಗ ರಸ್ತೆ ಕಾಣದಂತಾಯಿತು. ಆಗ ರಸ್ತೆ ಎಲ್ಲಿದೆ ಎಂದು ಮತ್ತೆ ಮ್ಯಾಪ್ ನೋಡಿದಾಗ ಮ್ಯಾಪ್, ಕುರುಪ್ಪಂಥಾರ ಹಳ್ಳದ ದಾರಿ ತೋರಿಸಿದೆ.

ಆದರೆ ಹಳ್ಳ ತುಂಬಿ ಹರಿಯುತ್ತಿರುವ ಅರಿವಿಲ್ಲದೆ ಆ ಕಡೆ ಕಾರು ಚಲಯಿಸಿದಾಗ ಹಳ್ಳದಲ್ಲಿ ಕಾರು ಮುಳುಗಿದೆ. ಪ್ರಯಾಣಿಕರು ಕಿಟಕಿಯಿಂದ ಹಾರಿ, ಹೇಗೋ ದಡ ತಲುಪಿದ್ದಾರೆ. ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿತ್ತು. ಕ್ರೇನ್ ಸಹಾಯದಿಂದ ಮೇಲಕ್ಕೆತ್ತುವ ಪ್ರಯತ್ನಗಳು ನಡೆದವು. ‘ಅಸಲಿಗೆ ಗೂಗಲ್ ತೋರಿಸಿದ್ದು ಹಳ್ಳದ ಹಾದಿಯನ್ನು ಮಳೆಯಿದ್ದ ಕಾರಣ ವಾಹನ ಚಾಲಕನಿಗೂ ಕೂಡ ತೊರೆ ಇರುವುದು ಗೊತ್ತಾಗದೇ ವಾಹನ ಚಲಾಯಿಸಿ, ಅನಾಹುತ ಸಂಭವಿಸಿದೆ’ ಎಂದು ಪೊಲೀಸರು ಹೇಳಿದ್ದಾರೆ. ಕೇರಳದಲ್ಲಿ ಗೂಗಲ್ ಪ್ರಮಾದ ಇದು ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮ್ಯಾಪ್ ಹಾಕಿಕೊಂಡು ಹೋಗಿದ್ದ ಕಾರೊಂದು ನದಿಗೆ ಉರುಳಿಬಿದ್ದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments