Monday, March 30, 2026
Homebig breakingಹಿಂದುಗಳು ಯಾರ ಮೇಲೂ ತಲ್ವಾರ್‌ ಝಳಪಿಸಿಲ್ಲ, ಮಸೀದಿಗೆ ಕಲ್ಲು ತೂರಿಲ್ಲ - ಹೇಡಿ ಸರ್ಕಾರ ನಮ್ಮವರ...

ಹಿಂದುಗಳು ಯಾರ ಮೇಲೂ ತಲ್ವಾರ್‌ ಝಳಪಿಸಿಲ್ಲ, ಮಸೀದಿಗೆ ಕಲ್ಲು ತೂರಿಲ್ಲ – ಹೇಡಿ ಸರ್ಕಾರ ನಮ್ಮವರ ಮೇಲೇಯೇ ಕ್ರಮಕ್ಕೆ ಮುಂದಾಗಿದೆ – ಸಿ.ಟಿ. ರವಿ ಕಿಡಿ

ಚಿಕ್ಕಮಗಳೂರು : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಸಂಬಂಧ ಗಣಪತಿ ಪ್ರತಿಷ್ಠಾಪನೆ ಮಾಡಿದವರ ಮೇಲೆ ಪ್ರಕರಣ ದಾಖಲು ಮಾಡಿದ ವಿಚಾರವಾಗಿ ಸರ್ಕಾರದ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಕಿಡಿಕಾರಿದ್ದಾರೆ.
ಹಿಂದುಗಳು ಸಾಬರ ಮೇಲೆ ತಲ್ವಾರ್ ಝಳಪಿಸಿಲ್ಲ, ಮಸೀದಿ ಮೇಲೆ ಕಲ್ಲು ತೂರಿಲ್ಲ. ತಲ್ವಾರ್ ಝಳಪಿಸಿದ್ದು ಮತಾಂಧರು. ಕಲ್ಲು ತೂರಿ, ಪೆಟ್ರೋಲ್ ಬಾಂಬ್ ಹಾಕಿದರು. ಅವರ ಮೇಲೆ ಕ್ರಮ ಆಗಬೇಕಿತ್ತು, ಈ ಹೇಡಿ ಸರ್ಕಾರ ಗಣಪತಿ ಕೂರಿಸಿದವರನ್ನೇ A1 ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
1-18ರ ಆರೋಪಿಗಳು ಶಾಂತಿಯುತ ಮೆರವಣಿಗೆ ಮಾಡಿದವರು. ಓಲೈಕೆ ರಾಜನೀತಿ ಪರಿಣಾಮ ಮತಾಂಧತೆಗೆ ಕೊನೆ ಇಲ್ಲದಂತಾಗಿದೆ. ಗಣಪತಿ ಮೆರವಣಿಗೆ ಬರಬೇಡ ಅನ್ನೋಕು ಅವನು ಯಾರು. ಮೊದಲು ಅವನನ್ನ ಒದ್ದು ಒಳ ಹಾಕಬೇಕಿತ್ತು. ಸರ್ಕಾರ A1 ಮಾಡಿರೋದು ಗಣಪತಿ ಕೂರಿಸಿದವರನ್ನ, ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!