Sunday, October 18, 2026
Homeಕ್ರೈಮ್ಇದೇ ಮೊದಲು, ಇದೇ ಕೊನೆಯಾಗ್ಬೇಕು - ಹಿಂದುವನ್ನು ಯಾವತ್ತೂ ಕೆಣಕೋದಕ್ಕೆ ಬರಬೇಡಿ-ವಜ್ರದೇಹಿ ಶ್ರೀ ವಾರ್ನಿಂಗ್..!

ಇದೇ ಮೊದಲು, ಇದೇ ಕೊನೆಯಾಗ್ಬೇಕು – ಹಿಂದುವನ್ನು ಯಾವತ್ತೂ ಕೆಣಕೋದಕ್ಕೆ ಬರಬೇಡಿ-ವಜ್ರದೇಹಿ ಶ್ರೀ ವಾರ್ನಿಂಗ್..!

Telegram Group
Join Now

ಮೂಡಿಗೆರೆ : ಹಿಂದು ಯಾರನ್ನೂ ಕೆಣಕಿಲ್ಲ, ಕೆಣಕೋದೂ ಇಲ್ಲ. ಈಗ ನಾಗಮಂಗಲದಲ್ಲಿ ಆಗಿರುವ ಘಟನೆ ಹಿಂದುವನ್ನು ಪ್ರಶ್ನೆ ಮಾಡುವಂತೆ ಮಾಡಿದೆ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಮೂಡಿಗೆರೆಯಲ್ಲಿ ಪಬ್ಲಿಕ್‌ ಇಂಪ್ಯಾಕ್ಟ್‌ಗೆ ಪ್ರತಿಕ್ರಿಯಿಸಿದ ಅವರು, ಹಿಂದುವನ್ನು ತಡೆಯುವುದಕ್ಕೆ ಅನ್ಯ ಸಮಾಜ ಮುಂದಾಗಿದೆ. ಹಿಂದುಗಳನ್ನು ಯಾರೂ ಕೆಣಕುವುದಕ್ಕೆ ಮುಂದಾಗುವುದು ಬೇಡ. ಹಿಂದು ಸಮಾಜಕ್ಕೆ ಸರ್ಕಾರ ರಕ್ಷಣೆ ಕೊಡಬೇಕು ಅಂತ ಆಗ್ರಹಿಸಿದರು.
ಗಣೇಶನ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತೇವೆ. ಹಿಂದುಗಳ ಮೇಲಿನ ದಾಳಿ ನಾಗಮಂಗಲದ ಘಟನೆಯಲ್ಲೇ ಮೊದಲು ಮತ್ತು ಕೊನೆಯಾಗಬೇಕು. ಹಿಂದುಗಳ ಸಹಿಷ್ಣುತೆ ಹಾಳಾಗಲು ಸರ್ಕಾರ ಉತ್ತೇಜನ ಕೊಡಬಾರದು. ಈ ಘಟನೆಯಲ್ಲೇ ಮುಂದಿಟ್ಟುಕೊಂಡು ಮುಂದಿನ ದಿನದಲ್ಲಿ ಪೆಂಡಾಲ್‌ನಲ್ಲಿ ಗಣಪತಿ ಕೂರಿಸ್ಬೇಡಿ ಅಂತ ಸುತ್ತೋಲೆ ಕೊಡೋದಕ್ಕೆ ಮುಂದಾಗ್ಬಾರ್ದು ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!