Saturday, October 17, 2026
Homeಜಿಲ್ಲಾಸುದ್ದಿKSRTC ಬಸ್‌ಗಳಲ್ಲಿ ಪ್ರಯಾಣಿಕರ ಆಸನಗಳ ಮೇಲೆ ತರಕಾರಿ ಮೂಟೆ ಸಾಗಾಟ: ಪ್ರಯಾಣಿಕರ ಆಕ್ರೋಶ!

KSRTC ಬಸ್‌ಗಳಲ್ಲಿ ಪ್ರಯಾಣಿಕರ ಆಸನಗಳ ಮೇಲೆ ತರಕಾರಿ ಮೂಟೆ ಸಾಗಾಟ: ಪ್ರಯಾಣಿಕರ ಆಕ್ರೋಶ!

Telegram Group
Join Now

ಚಿಕ್ಕಮಗಳೂರು : ಸಾರ್ವಜನಿಕರ ಸಂಚಾರಕ್ಕಾಗಿ ಇರುವ KSRTC ಬಸ್‌ಗಳಲ್ಲಿ ಪ್ರಯಾಣಿಕರ ಆಸನಗಳ ಮೇಲೆ ತರಕಾರಿ ಮೂಟೆಗಳನ್ನು ತುಂಬಿ ಸಾಗಿಸುತ್ತಿರುವುದು ನಿಯಮಬಾಹಿರವಾಗಿದ್ದು ಇದರಿಂದಾಗಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸೀಟುಗಳಿಲ್ಲದೆ ನಿಂತು ಪ್ರಯಾಣಿಸಲು ಪರದಾಡಿದ ಘಟನೆ ಚಿಕ್ಕಮಗಳೂರು ಡಿಪೋಗೆ ಸೇರಿದ ಸರ್ಕಾರಿ ಬಸ್ ನಲ್ಲಿ ಕಂಡುಬಂದಿದೆ.

ಹೌದು .. ಚಿಕ್ಕಮಗಳೂರು ಡಿಪೋಗೆ ಸೇರಿದ ಚಿಕ್ಕಮಗಳೂರು–ಬಾಳೆಹೊನ್ನೂರು–ಶೃಂಗೇರಿ ಮಾರ್ಗದ ಬಸ್‌ಗಳಲ್ಲಿ ನಿತ್ಯವೂ ತರಕಾರಿ ಮೂಟೆಗಳನ್ನು ಸಾಗಿಸಲಾಗುತ್ತಿದೆ ಎನ್ನಲಾಗಿದ್ದು,ಸೀಟ್ ಮೇಲೆ ತರಕಾರಿ ಮೂಟೆ 100 ಕಿ.ಮೀ. ವರೆಗೂ ನಿಂತೆ ಪ್ರಯಾಣಿಕರ ಪ್ರಯಾಣಿಸುವ ದುಃಸ್ಥಿತಿ ಎದುರಾಗಿದ್ದಕ್ಕೆ KSRTC  ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್‌ನ ಹಿಂಭಾಗದ ಸೀಟುಗಳ ಮೇಲೆಯೇ ತರಕಾರಿ ಮೂಟೆಗಳನ್ನು ತುಂಬಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೀಟುಗಳು ಸಿಗದೆ, ಕೆಲವರು ಸುಮಾರು 100 ಕಿಲೋಮೀಟರ್‌ವರೆಗೂ ನಿಂತುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!