ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿ ವಾರ ಕಳೆದಿದೆ.. ಈ ಸೀಸನ್‌ನ ಚೊಚ್ಚಲ ವಾರದ ಕಥೆ ಕಿಚ್ಚನ ಜೊತೆ ಶನಿವಾರ ನಡೆಯಿತು. ಪ್ರತಿ ಬಾರಿ ಗ್ರ್ಯಾಂಡ್ ಆಗಿ ಉಡುಪು ಧರಿಸಿ ಸ್ಟೈಲಿಶ್ ಆಗಿ ಆಗಮಿಸುತ್ತಿದ್ದ ಸುದೀಪ್ ಈ ಸಲ ಸಾಂಪ್ರದಾಯಿಕ ಉಡುಗೆ ತೊಟ್ಟು ಬರಿಗಾಲಲ್ಲಿ ವೇದಿಕೆ ಏರಿದ್ದು ವಿಶೇಷವಾಗಿತ್ತು.
ಬರಿಗಾಲಲ್ಲಿ ಎಂಟ್ರಿ ಕೊಡೋದಕ್ಕೂ ಕಾರಣ ಏನು ಅಂತ ನೋಡೋದಾದ್ರೆ, ನವರಾತ್ರಿ ಪ್ರಾರಂಭ ಆಗಿರುವ ಕಾರಣ ಸುದೀಪ್ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು. ಜೊತೆಗೆ ಚಪ್ಪಲಿ, ಶೂ ಧರಿಸಿ ಬರಿಗಾಲಲ್ಲಿ ಬಂದು ಒಕೆ ನಾ ಅಮ್ಮ ಎಂದು ಬಿಗ್ ಬಾಸ್ ಶೋ ಮೂಲಕ ತಾಯಿಯ ಒಪ್ಪಿಗೆ ಪಡೆದುಕೊಂಡರು.
ವಾರಕ್ಕೊಮ್ಮೆ ಬರುವ ಸುದೀಪ್, ಯಾವ ಸ್ಪರ್ಧಿಗೆ ಹೇಗೆಲ್ಲ ಕ್ಲಾಸ್ ತೆಗೆದುಕೊಳ್ಳುತ್ತಾರೆ ಅಂತ ಜನ ಕುತೂಹಲದಿಂದ ಕಾಯುತ್ತಿರುತ್ತಾರೆ. ಇದೇ ರೀತಿಯ ಕುತೂಹಲ ಕಿಚ್ಚ ಧರಿಸುವ ಉಡುಗೆಗಳ ಬಗ್ಗೆಯೂ ಇರುತ್ತೆ. ಬಿಗ್ ಬಾಸ್ ಶೋಗಾಗಿ ಸುದೀಪ್ ಅವರ ಉಡುಗೆಗಳನ್ನು ವಿನ್ಯಾಸ ಮಾಡಲು ಪ್ರತ್ಯೇಕ ತಂಡವೇ ಇದೆ.