ತಿರುವನಂತಪುರಂ : ಕೇರಳದಲ್ಲಿ ಸ್ವಾಮೀಜಿಯೊಬ್ಬರ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹಲವು ದಿನಗಳಿಂದ ನೆಯ್ಯಾಟಿಂಕರ ಗೋಪನ್ ಸ್ವಾಮಿಜಿ ಎಂಬವರು ನಾಪತ್ತೆಯಾಗಿದ್ದರು. ಇದೀಗ ಅವರದ್ದು ಎನ್ನಲಾದ ಮೃತದೇಹವೊಂದು ಸಮಾಧಿಯೊಳಗೆ ಪತ್ತೆಯಾಗಿದೆ.
ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಹೈಕೋರ್ಟ್ ಆದೇಶದಿಂದ ಪೊಲೀಸರು ಸಮಾಧಿ ಅಗೆದಿದ್ದಾರೆ. ಈ ವೇಳೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಪ್ರಸಂಗವೂ ಎದುರಾಯಿತು. ಸಮಾಧಿ ಅಗೆದ ವೇಳೆ ಕುಳಿತ ಭಂಗಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆಯಾಗಿದೆ. ಆದರೆ ಇದು ಗೋಪನ್ ಸ್ವಾಮಿಯವರದ್ದೇ ಮೃತದೇಹ ಎಂಬುದು ಇನ್ನೂ ಖಚಿತವಾಗಿಲ್ಲ. ವೈದ್ಯಕೀಯ ಪರೀಕ್ಷೆಯಿಂದಷ್ಟೇ ಯಾರ ಮೃತದೇಹ ಅನ್ನೋದು ದೃಢವಾಗಬೇಕಿದೆ. ಭಸ್ಮ, ಪೂಜಾ ಸಾಮಗ್ರಿಗಳು ಮತ್ತು ಬಟ್ಟೆಗಳನ್ನು ಸಮಾಧಿಯಿಂದ ಪತ್ತೆ ಮಾಡಲಾಗಿದೆ.
ಮೃತದೇಹ ಯಾರದ್ದು ಅಂತ ತಿಳಿಯಬೇಕಾದ್ರೆ ಮೂರು ಹಂತದ ಪರೀಕ್ಷೆ ಅಗತ್ಯವಿದೆ. ವಿಷ ಸೇವಿಸಿ ಸಾವಾಗಿದೆಯಾ? ಹಲ್ಲೆಯಿಂದ ಮೃತರಾಗಿದ್ದಾರಾ? ಅಥವಾ ಸಹಜ ಸಾವಾ ಅನ್ನುವುದನ್ನು ತಜ್ಞರು ಬಹಿರಂಗಪಡಿಸಬೇಕಿದೆ.
