Thursday, July 2, 2026
Homeಕ್ರೈಮ್ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ - ವೀಡಿಯೋ ನೀಡಿ ಎಂದು ಕೇಳಿದ ಪ್ರಜ್ವಲ್..!‌ -...

ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ – ವೀಡಿಯೋ ನೀಡಿ ಎಂದು ಕೇಳಿದ ಪ್ರಜ್ವಲ್..!‌ – ಕೋರ್ಟ್‌ ಹೇಳಿದ್ದೇನು ಗೊತ್ತಾ..?

Telegram Group
Join Now

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ತನ್ನ ವಿರುದ್ಧ ಪ್ರಕರಣದ ವೀಡಿಯೋ, ಫೋಟೋಗಳನ್ನು ನೀಡಬೇಕೆಂದು ಪ್ರಜ್ವಲ್‌ ರೇವಣ್ಣ ಅರ್ಜಿ ಹಾಕಿದ್ದರು.
ಈ ಸಂಬಂಧ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯಿತು. ಈ ಸಂದರ್ಭ ತಮ್ಮ ವಿರುದ್ಧದ ಆರೋಪಗಳನ್ನು ಸಮರ್ಥವಾಗಿ ಡಿಪೆಂಡ್‌ ಮಾಡುವ ಸಲುವಾಗಿ ನಮಗೆ ವೀಡಿಯೋ ಹಾಗೂ ಇತರೆ ದಾಖಲೆಗಳನ್ನ ನೀಡುವಂತೆ ವಕೀಲರು ಮನವಿ ಮಾಡಿದರು.
ಆದರೆ ಇದಕ್ಕೆ ಕೋರ್ಟ್‌ ಸಮ್ಮತಿಸಲಿಲ್ಲ. ಬೇಕಿದ್ದರೆ ಕೋರ್ಟ್‌ನಲ್ಲೇ ಅದನ್ನು ನೀವು ನೋಡಬಹುದು. ನಿಮಗೆ ಅದನ್ನು ನೀಡಿದರೆ ಇತರರ ಘನತೆಗೆ ಧಕ್ಕೆಯಾಗುತ್ತದೆ. ಇಂದೇ ಅದನ್ನು ಕೋರ್ಟ್‌ನಲ್ಲಿ ನೋಡಿ ಎಂದು ನ್ಯಾಯಾಧೀಶರು ಸೂಚಿಸಿದರು. ಆದರೆ ಇಂದು ನಮಗೆ ನೋಡಲು ಸಾಧ್ಯವಿಲ್ಲ. ಸೋಮವಾರ ಅವಕಾಶ ಕೊಡಿ ಎಂದು ವಕೀಲರು ಕೋರಿದರು. ಸೋಮವಾರ ನೀಡಲು ಸಾಧ್ಯವಿಲ್ಲ ಅಂತ ಕೋರ್ಟ್‌ ಹೇಳಿತು. ಹೀಗಾಗಿ ಕೊನೆಗೆ ಶನಿವಾರ ವೀಡಿಯೋ, ಫೋಟೋ ಹಾಗೂ ಇತರೆ ದಾಖಲೆಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ.
ಪ್ರಕರಣ ಸಂಬಂಧ 1500ಕ್ಕೂ ಅಧಿಕ ಫೋಟೋ, 2000ಕ್ಕೂ ಅಧಿಕ ವೀಡಿಯೋಗಳು ನ್ಯಾಯಾಲಯ ಬಳಿ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments