Tuesday, March 31, 2026
Homebig breakingಮಂಗಳೂರು ದರೋಡೆ ಪ್ರಕರಣ - ಆರೋಪಿಗಳಿಗಾಗಿ ಉತ್ತರ ಭಾರತದಲ್ಲಿ ಬಲೆ ಬೀಸಲು ತೆರಳಿದ ಪೊಲೀಸರು..!

ಮಂಗಳೂರು ದರೋಡೆ ಪ್ರಕರಣ – ಆರೋಪಿಗಳಿಗಾಗಿ ಉತ್ತರ ಭಾರತದಲ್ಲಿ ಬಲೆ ಬೀಸಲು ತೆರಳಿದ ಪೊಲೀಸರು..!

ಮಂಗಳೂರು : ಉಳ್ಳಾಲದ ಕೋಟೆಕಾರು ಬ್ಯಾಂಕ್​ನಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಇನ್ನೂ ಸಿಕ್ಕಿಲ್ಲ. ಆರಂಭದಲ್ಲಿ ದರೋಡೆ ಮಾಡಿದ ಖತರ್ನಾಕ್‌ಗಳು ಕೇರಳಕ್ಕೆ ಸಾಗಿರುವ ಸಾಧ್ಯಯೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ಸದ್ಯ ದರೋಡೆಕೋರರ ಗ್ಯಾಂಗ್‌ ಉತ್ತರ ಭಾರತೆದೆಡೆಗೆ ಸಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಕಳ್ಳರ ಜಾಡು ಹಿಡಿದ ಪೊಲೀಸರು ಉತ್ತರ ಭಾರತದ ರಾಜ್ಯಗಳೆಡೆಗೆ ಬಲೆ ಬೀಸಿದ್ದಾರೆ.
ಆರೋಪಿಗಳು ಬ್ಯಾಂಕ್‌ನಿಂದ ಕದ್ದ ಚಿನ್ನಾಭಗರಣಗಳನ್ನು ಸಾಗಿಸುವಲ್ಲಿ ಎರಡು ಕಾರ್‌ಗಳನ್ನು ಬಳಸಿರುವುದು ತಿಳಿದುಬಂದಿದೆ. ಮೊದಲಿಗೆ ಫಿಯೆಟ್‌ ಕಾರ್‌ನಲ್ಲಿ ಸಾಗಿಸಿದ್ದಾರೆಂದು ಶಂಕೆ ವ್ಯಕ್ತವಾಗಿತ್ತು. ಆದರೀಗ ಚಿನ್ನ ಸಾಗಿಸಿದ್ದು ಶೆವೊರ್ಲೆ ಕಾರ್‌ನಲ್ಲಿ ಅನ್ನೋದು ತಿಳಿದುಬಂದಿದೆ. ಶೆವೊರ್ಲೆ ಕಾರ್‌ನಲ್ಲಿ ಮಂಗಳೂರು ಕಡೆ ಬಂದು ಮೊಬೈಲ್‌ ಎಸೆದು ಸರ್ವಿಸ್‌ ರಸ್ತೆಗಳನ್ನು ಬಳಸಿ ಎಸ್ಕೇಪ್‌ ಆಗಿದ್ದಾರೆ. ಕೇರಳಕ್ಕೆ ತೆರಳಿ ಅಲ್ಲಿ ಪರಸ್ಪರ ಎರಡು ಕಾರ್‌ನಲ್ಲಿದ್ದ ಮಂದಿ ಭೇಟಿಯಾಗಿ ಅಲ್ಲಿಂದ ಪ್ಲಾನ್‌ ಹಾಕಿ ಉತ್ತರ ಭಾರತದ ಕಡೆ ತೆರಳಿರುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!