Friday, October 16, 2026
Homeಆರೋಗ್ಯಹೈದರಾಬಾದ್‌ ವೈದ್ಯರ ಸಾಹಸ - ಮೆಟ್ರೋ ರೈಲಿನಲ್ಲಿ ಹೃದಯ ಸಾಗಿಸಿ‌ ವ್ಯಕ್ತಿಯೊಬ್ಬರ ಜೀವ ಉಳಿಸಿದ ಡಾಕ್ಟರ್ಸ್..!

ಹೈದರಾಬಾದ್‌ ವೈದ್ಯರ ಸಾಹಸ – ಮೆಟ್ರೋ ರೈಲಿನಲ್ಲಿ ಹೃದಯ ಸಾಗಿಸಿ‌ ವ್ಯಕ್ತಿಯೊಬ್ಬರ ಜೀವ ಉಳಿಸಿದ ಡಾಕ್ಟರ್ಸ್..!

Telegram Group
Join Now

ಹೈದರಾಬಾದ್‌ : ಝೀರೋ ಟ್ರಾಫಿಕ್‌ನಲ್ಲಿ ಅಂಗಾಗಗಳನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ಆಂಬುಲೆನ್ಸ್‌ನಲ್ಲಿ ರವಾನಿಸುವುದನ್ನು ನಾವು ನೋಡಿದ್ದೇವೆ. ಇದೀಗ ದಾನಿಯೊಬ್ಬರ ಹೃದಯವೊಂದನ್ನು ಮೆಟ್ರೋ ರೈಲಿನಲ್ಲಿ ಸಾಗಿಸಲಾಗಿದೆ.
ಇದು ಆಗಿರೋದು ನಮ್ಮ ಪಕ್ಕದ ರಾಜ್ಯ ಹೈದರಾಬಾದ್‌ನಲ್ಲಿ. 13 ನಿಮಿಷದಲ್ಲಿ 13 ಕಿ.ಮೀ. ದೂರವನ್ನು ಕ್ರಮಿಸುವ ರೀತಿಯಲ್ಲಿ ಮೆಟ್ರೋದಲ್ಲಿ ಹಸಿರು ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು. ಕನ್ನಡಿಗ ವೈದರೊಬ್ಬರ ಮೇಲುಸ್ತುವಾರಿಯಲ್ಲಿ ಈ ಪ್ರಕ್ರಿಯೆ ನಡೆದಿದೆ. ಎಲ್‌ಬಿ ನಗರದ ಕಾಮಿನೇನಿ ಆಸ್ಪತ್ರೆಯಿಂದ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಹೃದಯ ಸಾಗಿಸಲಾಗಿದೆ.
ಧಾರವಾಡ ಮೂಲದ ವೈದ್ಯ ಅಜಯ್ ಎಂಬವರು ಹೃದಯ ಸಾಗಿಸುವ ಕಾರ್ಯದ ತಂಡದಲ್ಲಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ 35 ವರ್ಷದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಅವರ ಕುಟುಂಬ ಅಂಗಾಂಗ ದಾನಕ್ಕೆ ಮುಂದಾಗಿತ್ತು. ಗ್ಲೆನ್ ಗೆಲ್ಸ್ ಗ್ಲೋಬಲ್ ಆಸ್ಪತ್ರೆಯ ರೋಗಿಯೊಬ್ಬರಿಗೆ ಹೃದಯದ ಅಗತ್ಯವಿತ್ತು. ನಗರದ ಮೆಟ್ರೋ ಅಧಿಕಾರಿಗಳ ಜೊತೆ ಹಿರಿಯ ವೈದ್ಯಾಧಿಕಾರಿಗಳು ಸಂವಹನ ನಡೆಸಿ ಅಗತ್ಯಸಮಯದಲ್ಲಿ ಮೆಟ್ರೋ ರೈಲಿನ ಮೂಲಕ ಹೃದಯ ರವಾನೆ ಮಾಡಿ ವ್ಯಕ್ತಿಗೆ ಜೋಡಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!