Thursday, October 15, 2026
Homeಜಿಲ್ಲಾಸುದ್ದಿಪೆನ್‌ಡ್ರೈವ್ ವಿಚಾರ: ಸಚಿವ ಸ್ಥಾನದ ವಜಾಕ್ಕೆ ಮೋದಿಗೆ ದೂರು ಕೊಡ್ತೀನಿ: HDK ವಿರುದ್ಧ ಶ್ರೇಯಸ್...

ಪೆನ್‌ಡ್ರೈವ್ ವಿಚಾರ: ಸಚಿವ ಸ್ಥಾನದ ವಜಾಕ್ಕೆ ಮೋದಿಗೆ ದೂರು ಕೊಡ್ತೀನಿ: HDK ವಿರುದ್ಧ ಶ್ರೇಯಸ್ ಪಟೇಲ್ ಕಿಡಿ

Telegram Group
Join Now

ಹಾಸನ: ಪೆನ್‌ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಹಾಸನದ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ನಡುವೆ ತೀವ್ರ ವಾಗ್ದಾಳಿ ಹಾಗೂ ರಾಜಕೀಯ ಜಟಾಪಟಿ ಆರಂಭವಾಗಿದೆ

ತಮ್ಮ ಮೇಲಿನ ವೈಯಕ್ತಿಕ ತೇಜೋವಧೆ ಮತ್ತು ಸುಳ್ಳು ಆರೋಪಗಳನ್ನು ವಿರೋಧಿಸಿರುವ ಶ್ರೇಯಸ್ ಪಟೇಲ್, ಹಿರಿಯರೆಂದು ಗೌರವಿಸಿ ಇಷ್ಟು ದಿನ ಸಹಿಸಿಕೊಂಡಿದ್ದೇನೆ. ಇನ್ನು ಸಹಿಸಲು ಸಾಧ್ಯವಿಲ್ಲ ಕುಮಾರಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುವುದಾಗಿ ಶ್ರೇಯಸ್ ಪಟೇಲ್ ಗುಡುಗಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಎಚ್ಚರಿಸಿದ್ದಾರೆ.

ಜಗತ್ತಿನಲ್ಲಿ ಎಲ್ಲದಕ್ಕೂ ಮದ್ದಿದೆ, ಆದರೆ ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದು ಟಾಂಗ್ ನೀಡಿದ್ದಾರೆ.ನೀವು ಮಾತ್ರ ಒಕ್ಕಲಿಗರಲ್ಲ, ನಾವೂ ಒಕ್ಕಲಿಗರೇ ಎಂದು ತಿರುಗೇಟು ನೀಡುವ ಮೂಲಕ ರಾಜಕೀಯ ವಾಕ್ಸಮರಕ್ಕೆ ಮತ್ತಷ್ಟು ಕಾವು ತುಂಬಿದ್ದಾರೆ

ಹಾಸನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅನುಭವಿಸಿದ ಸೋಲಿನ ಹತಾಶೆಯಿಂದ ತನ್ನನ್ನು ಗುರಿಯಾಗಿಸಿಕೊಂಡು ಈ ರೀತಿ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಶ್ರೇಯಸ್ ಪಟೇಲ್ ದೂರಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಕೇವಲ ತಮ್ಮ ಕುಟುಂಬ ಮಾತ್ರ ಬೆಳೆಯಬೇಕು, ಬೇರೆ ಯಾರೂ ಮುಂಚೂಣಿಗೆ ಬರಬಾರದು ಎಂಬ ಸ್ವಾರ್ಥದಿಂದ ಜೆಡಿಎಸ್ ನಾಯಕರು ಹೀಗೆ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!