ಚಿಕ್ಕಮಗಳೂರು : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಗದು ಹಾಗೂ ಚಿನ್ನಾಭರಣ ಕಳುವಾಗಿರುವ ಪ್ರಕರಣ ಬಸವನಹಳ್ಳಿಯ ಹನುಮಂತನ ಗರದಲ್ಲಿ ಬೆಳಕಿಗೆ ಬಂದಿದೆ.
ಕಮಲಾಕ್ಷಿ ಎಂಬವರು ಬಡಾವಣೆಯಲ್ಲಿರುವ ತಾಯಿ ಮನೆಗೆ ತೆರಳಿದ್ದ ಸಂದರ್ಭ ಜನವರಿ 20ರಂದು ಮಧ್ಯರಾತ್ರಿ ಘಟನೆ ನಡೆದಿದೆ. ಮರುದಿನ ಬೆಳಗ್ಗೆ ಬಂದು ನೋಡುವಾಗ ಬಾಗಿಲಿನ ಬೀಗವನ್ನು ಒಡೆದು ಕಳ್ಳತನವಾಗಿರುವುದು ತಿಳಿದಿದೆ. ಬೀರುವಿನಲ್ಲಿದ್ದ 30,000/- ರೂ. ಹಣ ಹಾಗೂ 130 ಗ್ರಾಂ ಬೆಳ್ಳಿ ಮತ್ತು 19 ಗ್ರಾಂ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಬಾಗಿಲು ಮುರಿದು ಒಳ ನುಗ್ಗಿ ಹಣ, ಚಿನ್ನಾಭರಣ ದೋಚಿದ ಕಳ್ಳರು
RELATED ARTICLES