ಹಾಸನ : ರಾಜ್ಯದ ಜನಪ್ರಿಯ ಪ್ರಾದೇಶಿಕ ದಿನಪತ್ರಿಕೆ ʼಜನಮಿತ್ರʼ ಶೈಕ್ಷಣಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಶೈಕ್ಷಣಿಕ ಮೇಳ ಆಯೋಜಿಸಿದೆ. ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ಹಾಸನದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಈ ಮೇಳ ನಡೆಯಲಿದೆ.
ರಾಜ್ಯದ ಜನಪ್ರಿಯ ಡಿಜಿಟಲ್ ಮಾಧ್ಯಮ ಪಬ್ಲಿಕ್ ಇಂಪ್ಯಾಕ್ಟ್ ಡಿಜಿಟಲ್ ಪಾರ್ಟ್ನರ್ ಆಗಿರುವ ಈ ಮೇಳದಲ್ಲಿ ಹಲವು ವಿಶೇಷತೆಗಳಿವೆ. ಮಕ್ಕಳಿಂದ ಹಿರಿಯರವರೆಗೆ ಹಲವು ಆಕರ್ಷಣೆಗಳು ಆಯೋಜನೆಗೊಂಡಿವೆ. ಮೇಳದಲ್ಲಿ ಏನೇನಿರುತ್ತೆ? ಯಾರ್ಯಾರು ಅಂದು ನಮ್ಮ ಜೊತೆಯಾಗುತ್ತಾರೆ? ಏನೆಲ್ಲಾ ಕಾರ್ಯಕ್ರಮಗಳಿವೆ? ಯಾವೆಲ್ಲಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಇದೆ ಎಂಬಿತ್ಯಾದಿ ಮಾಹಿತಿಗಳ ವಿವರ ಇಲ್ಲಿದೆ ನೋಡಿ…






