Wednesday, August 12, 2026
Homeಕ್ರೈಮ್ಮೊಬೈಲ್‌ ಹೆಚ್ಚು ಬಳಸ್ಬೇಡ, ಚನ್ನಾಗಿ ಓದು ಎಂದಿದ್ದೇ ತಪ್ಪಾಯ್ತಾ..! ಉಡುದಾರದಿಂದ ನೇಣು ಬಿಗಿದು ಪ್ರಾಣ ಕಳೆದುಕೊಂಡ...

ಮೊಬೈಲ್‌ ಹೆಚ್ಚು ಬಳಸ್ಬೇಡ, ಚನ್ನಾಗಿ ಓದು ಎಂದಿದ್ದೇ ತಪ್ಪಾಯ್ತಾ..! ಉಡುದಾರದಿಂದ ನೇಣು ಬಿಗಿದು ಪ್ರಾಣ ಕಳೆದುಕೊಂಡ 13 ವರ್ಷದ ಬಾಲಕ..!

Telegram Group
Join Now

ಬೆಂಗಳೂರು : ಈಗಿನ ಮಕ್ಕಳಿಗೆ ಜೋರು ಮಾಡುವಂತಿಲ್ಲ, ಬುದ್ಧಿವಾದ ಹೇಳುವಂತಿಲ್ಲ… ಏನಾದ್ರು ಸ್ವಲ್ಪ ಜೋರಾಗಿ ಬೈದುಬಿಟ್ಟರೆ ಮುಂದೇನಾಗ್ಬಿಡುತ್ತೋ ಅನ್ನುವ ಚಿಂತೆ ಪೋಷಕರಲ್ಲಿ ಕಾಡುತ್ತೆ. ಮಕ್ಕಳು ಕೂಡಾ ಹಾಗೇ, ಯಾಕಾಗಿ ಬೈಯ್ಯುತ್ತಾರೆ… ಯಾಕೆ ಬುದ್ಧಿ ಮಾತು ಹೇಳ್ತಾರೆ ಅಂತ ಚಿಂತನೆಗೂ ಹೋಗೋದಿಲ್ಲ. ಆ ಕ್ಷಣಕ್ಕೆ ದುಡುಕಿ ಪ್ರಾಣವನ್ನೇ ಕಳೆದುಕೊಂಡು ಬಿಡ್ತಾರೆ.
ಇಂಥ ಅನೇಕ ನಿದರ್ಶನಗಳನ್ನ ನಾವು ನೋಡಿದ್ದೇವೆ. ಈಗ ಮತ್ತೊಂದು ಪ್ರಕರಣ ನಡೆದಿದೆ. ನೀನು ಮೊಬೈಲ್ ಹೆಚ್ಚಾಗಿ ಮೊಬೈಲ್ ನೋಡುತ್ತೀಯ, ಓದೀದಿಲ್ಲ. ಇದು ಮಕ್ಕಳಿಗೆ ಒಳ್ಳೆಯದಲ್ಲ ಎಂದು ಬೈದು ಬುದ್ಧಿ ಹೇಳಿದ್ದಕ್ಕೆ 13 ವರ್ಷದ ಬಾಲಕ ನೇಣಿಗೆ ಶರಣಾಗಿದ್ದಾನೆ.
ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನ‌ನಗರದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಬಾಲಕನನ್ನು ಧ್ರುವ (13) ಎಂದು ಗುರುತಿಸಲಾಗಿದೆ. 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ತಂಗಿ ಮುಂದೆಯೇ ಸೊಂಟಕ್ಕೆ ಕಟ್ಟಿದ್ದ ಉಡದಾರವನ್ನು ಬಿಚ್ಚಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಮನೆಯಲ್ಲಿ ಹೆಚ್ಚಾಗಿ ಮೊಬೈಲ್ ನೋಡುತ್ತಿದ್ದ ಧ್ರುವನಿಗೆ ಪೋಷಕರು ಬೈದು ಬುದ್ಧಿ ಹೇಳಿದ್ದರು. ಮನೆಯವರ ಮಾತು ಕೇಳದೆ ಅತಿ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದ. ಹೀಗಾಗಿ, ಮನೆಯಲ್ಲಿ ಮೊಬೈಲ್ ಇಡದೇ ನಿನ್ನೆ ಬಾಲಕನ ತಂದೆ, ತಾಯಿ ತಮ್ಮೊಂದಿಗೆ ಮೊಬೈಲ್ ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದರು. ಸಂಜೆ ಶಾಲೆ ಮುಗಿಸಿ ಬಂದಿದ್ದ ಅಣ್ಣ ಹಾಗೂ ತಂಗಿ ಇಬ್ಬರೇ ಮನೆಯಲ್ಲಿದ್ದರು. ಮೊಬೈಲ್ ಇಲ್ಲದ್ದರಿಂದ ಕುಪಿತಗೊಂಡ ಬಾಲಕ ಪ್ಯಾಂಟ್ ತೆಗೆದು ಸೊಂಟದಲ್ಲಿದ್ದ ಉಡದಾರವನ್ನು ಬಿಚ್ಚಿ ಫ್ಯಾನ್‌ಗೆ ಕಟ್ಟಿದ್ದಾನೆ. ನಂತರ ಅದನ್ನು ಕುತ್ತಿಗೆಗೆ ಬಿಗಿದುಕೊಂಡು ಒದ್ದಾಡಿದ್ದಾನೆ.
ತಂಗಿಗೆ ಅವನನ್ನು ರಕ್ಷಣೆ ಮಾಡುವುದು ಗೊತ್ತಾಗದೇ ಸುಮ್ಮನೇ ನೋಡುತ್ತಾ ನಿಂತಿದ್ದಾಳೆ. ಸಂಜೆ 7 ಗಂಟೆ ಸುಮಾರಿಗೆ ತಾಯಿ ಬಂದು ನೋಡಿದಾಗ ಉಡದಾರ ತುಂಡಾಗಿ ಅರೆ ಜೀವ ಸ್ಥಿತಿಯಲ್ಲಿ ಮಗ ನೆಲದಲ್ಲಿ ಬಿದ್ದಿದ್ದನ್ನು ಕಂಡಿದ್ದಾರೆ. ಸ್ಥಳೀಯರ ಸಹಕಾದಿಂದ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟೊತ್ತಿಗೆ ಬಾಲಕನ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮಗನ ಸಾವಿನಿಂದ ಪೋಷಕರು ಕಂಗಾಲಾಗಿದ್ದಾರೆ.
ಮತ್ತೊಂದೆಡೆ ಸಣ್ಣ ವಯಸ್ಸಿಗೆ ಮಕ್ಕಳು ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಮಕ್ಕಳಿಗೆ ಯಾವ ರೀತಿ ಬುದ್ಧಿವಾದ ಹೇಳೋದು ಅನ್ನುವ ಚಿಂತೆ ಪೋಷಕರಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments