Monday, February 9, 2026
Homebig breakingಸತತ ಎರಡನೇ ಬಾರಿ ವಿಶ್ವಕಪ್‌ಗೆ ಮುತ್ತಿಕ್ಕಿದ ಭಾರತ - ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಭರ್ಜರಿ...

ಸತತ ಎರಡನೇ ಬಾರಿ ವಿಶ್ವಕಪ್‌ಗೆ ಮುತ್ತಿಕ್ಕಿದ ಭಾರತ – ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಭರ್ಜರಿ ಗೆಲುವು..!

ಮಲೇಷಿಯಾ : ICC ಮಹಿಳೆಯರ T20 ಅಂಡರ್-19 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾದ ಯುವತಿಯರು ಭರ್ಜರಿ ಗೆಲುವು ಪಡೆದು ಮತ್ತೊಮ್ಮೆ ವರ್ಲ್ಡ್​​ಕಪ್​ಗೆ ಮುತ್ತಿಕ್ಕಿದ್ದಾರೆ. ಕಳೆದ ಬಾರಿಯೂ ಭಾರತದ T20 ಅಂಡರ್-19 ವನಿತೆಯರು ಚಾಂಪಿಯನ್ ಆಗಿದ್ದರು.

ಭಾರತದ ವನಿತೆಯರು ಈ ಟೂರ್ನಿಯ ಆರಂಭದಿಂದಲೂ ಸೋಲನ್ನೇ ನೋಡಲಿಲ್ಲ ಎನ್ನುವುದು ವಿಶೇಷ.
ಕೌಲಾಲಂಪುರ್​​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ದಕ್ಷಿಣ ಆಫ್ರಿಕಾದ ತಂಡದ ನಾಯಕಿ ಕೈಲಾ ರೇನೆಕೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇಂಗ್ಲೆಂಡ್ ವಿರುದ್ಧದ ಸೆಮಿಸ್​ನಲ್ಲಿ ಬೌಲಿಂಗ್​ನಲ್ಲಿ ಪರಾಕ್ರಮ ಮೆರೆದಿದ್ದ ಭಾರತದ ಯಂಗ್​ ಗರ್ಲ್ಸ್​ ದಕ್ಷಿಣ ಆಫ್ರಿಕಾ ವಿರುದ್ಧವೂ ಬೆಸ್ಟ್ ಬೌಲಿಂಗ್ ಮಾಡಿದರು. ಇದರಿಂದ ಆಫ್ರಿಕಾ ನಿಗದಿತ 20 ಓವರ್​ಗಳಲ್ಲಿ ಆಲೌಟ್ ಆಗಿ ಕೇವಲ 82 ರನ್​ಗಳನ್ನು ಮಾತ್ರ ಗಳಿಸಿತು.


ಭಾರತದ ಪರ ಬೌಲರ್ಸ್​ ಮಿಂಚಿನ ಬೌಲಿಂಗ್ ಮಾಡಿ ಆಫ್ರಿಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದಾರೆ. ಗೊಂಗಡಿ ತ್ರಿಷಾ 3 ವಿಕೆಟ್ ಪಡೆದರೆ, ಆಯುಷಿ ಶುಕ್ಲಾ, ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ ತಲಾ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
83 ರನ್​ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಯುವತಿಯರು ಕೇವಲ 1 ವಿಕೆಟ್ ಕಳೆದುಕೊಂಡು ಜಯಭೇರಿ ಭಾರಿಸಿದರು. ಬೌಲಿಂಗ್​ನಲ್ಲೂ ಮಿಂಚಿದ್ದ ಗೊಂಗಡಿ ತ್ರಿಷಾ ಬ್ಯಾಟಿಂಗ್​ನಲ್ಲಿ 8 ಫೋರ್ ಸಮೇತ 44 ರನ್​ ಸಿಡಿಸಿದರು. ಸಾನಿಕಾ ಚಲ್ಕೆ ಕೂಡ 26 ರನ್​ ಗಳಿಸಿ ತಂಡದ ಗೆಲುವಿಗೆ ತಮ್ಮ ಕಾಣಿಕೆ ನೀಡಿದರು. 11.2 ಓವರ್​ಗಳಲ್ಲಿ 1 ವಿಕೆಟ್​ ಕಳೆದುಕೊಂಡು 84 ರನ್​ ಗಳಿಸುವ ಮೂಲಕ ಭಾರತ ಗೆಲುವಿನ ನಗೆ ಬೀರಿತು. ಈ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ ಯಾವುದನ್ನೂ ಸೋಲದೇ ವನಿತೆಯರು ಗೆದ್ದಿದ್ದಾರೆ.
ಗೊಂಗಡಿ ತ್ರಿಷಾ ಅವರು ಪ್ಲೇಯರ್ ಆಫ್ ದ ಮ್ಯಾಚ್ ಹಾಗೂ ಪ್ಲೇಯರ್ ಆಫ್ ದ ಸೀರೀಸ್ ಪ್ರಶಸ್ತಿ ಪಡೆದುಕೊಂಡರು. ವಿಜೇತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!