Monday, June 29, 2026
Homeಜಿಲ್ಲಾಸುದ್ದಿಹೇಮಾವತಿ ನೀರಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ಕುಣಿಗಲ್ ಶಾಸಕ ರಂಗನಾಥ್

ಹೇಮಾವತಿ ನೀರಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ಕುಣಿಗಲ್ ಶಾಸಕ ರಂಗನಾಥ್

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿವಾದ ಮತ್ತಷ್ಟು ತೀವ್ರಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಹೇಮಾವತಿ ನೀರಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ಹೇಳಿಕೆ ನೀಡಿದ್ದಾರೆ.

ಕುಣಿಗಲ್ ತಾಲೂಕಿನ ಎಲೆಯೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿನ ರೈತರಿಗಾಗಿ ತಗ್ಗಿ ಬಗ್ಗಿ ನಡೆಯಲು ಸಿದ್ಧನಿದ್ದೇನೆ. ನೀವು ಪೈಪ್‌ಲೈನ್ ಕಾಮಗಾರಿಗೆ ಅಡ್ಡಿಪಡಿಸಲು ನಿಂತರೆ ಕುಣಿಗಲ್ ತಾಲೂಕಿನ ನಾವು ಗಂಡು ಮಕ್ಕಳು ಕಚ್ಚೆ ಕಟ್ಟಿ ಹೋರಾಟ ಮಾಡೋಕೆ ತಯಾರಿದ್ದೇವೆ. ಮುಂದಿನ ದಿನಗಳಲ್ಲಿ ಬೀದಿಗೆ ಇಳಿಯುತ್ತೇವೆ. ನಮ್ಮ ತಾಲೂಕಿನ ನೀರಿಗಾಗಿ ಹೋರಾಟ ಮಾಡುತ್ತೇವೆ ಎಂದರು.

ನಾನು ಸಹ ಕುಣಿಗಲ್ ತಾಲೂಕಿನ ಮಗನಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹಿಂದೆಮುಂದೆ ನೋಡಲ್ಲ. ನನ್ನ ತಾಲೂಕಿನ ರೈತರಿಗೋಸ್ಕರ ನನ್ನ ದೇಹ ತ್ಯಾಗಕ್ಕೂ ಸಿದ್ಧನಿದ್ದೇನೆ. ನಮ್ಮೂರು ಎಲೆಯೂರಿನಲ್ಲಿ ಈ ಮಾತು ಹೇಳುತ್ತಿದ್ದೇನೆ. ನಾನು ಬಹಳ ತಾಳ್ಮೆಯಿಂದ ನೋಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಭಾವುಕ ಮಾತುಗಳನ್ನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments