ಸಕಲೇಶಪುರ: RTO ಕಚೇರಿಯಲ್ಲಿ ಬ್ರೋಕರ್ ಬರ್ತಡೇ ಆಚರಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ಸಹಾಯ ಮಾಡಿದ್ದ ಮೂವರು ಅಧಿಕಾರಿಗಳನ್ನ ಅಮಾನತು ಮಾಡಲು ಸಾರಿಗೆ ಮತ್ತು ಶಿಸ್ತು ಪ್ರಾಧಿಕಾರದ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ.

ಮೋಟಾರು ವಾಹನ ನಿರೀಕ್ಷಕಿ ಆಶಾ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ಎನ್. ಮಧುರಾ ಹಾಗೂ ಕಚೇರಿ ಅಧಿಕ್ಷಕ ಎಂ.ಕೆ.ಗಿರೀಶ್ ಇವರ ಸಮ್ಮುಖದಲ್ಲೇ ಹುಟ್ಟುಹಬ್ಬವನ್ನ ವಿಜೃಂಭಣೆಯಿಂದ ಆಚರಿಸಿ ಬಿರಿಯಾನಿ ಪಾರ್ಟಿ ಕೂಡ ಮಾಡಿದ್ದರು. ಹೀಗಾಗಿ ಇವರನ್ನ ಅಮಾನತುಗೊಳಿಸಲು ಆದೇಶ ನೀಡಿದೆ.
ಈ ಬಗ್ಗೆ ವಿಸ್ತೃತ ಸುದ್ದಿ ಬಿತ್ತರಿಸಿದ್ದ ಪಬ್ಲಿಕ್ ಇಂಪ್ಯಾಕ್ಟ್ ಸುದ್ದಿ ಪ್ರಸಾರ ಹಿನ್ನೆಲೆ ಅಧಿಕಾರಿ ಆಶಾ ಸೇರಿ ಮೂವರು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲು ಸಾರಿಗೆ ಮತ್ತು ಶಿಸ್ತು ಪ್ರಾಧಿಕಾರದ ಆಯುಕ್ತರಿಂದ ಆದೇಶ ನೀಡಲಾಗಿದೆ.
ಜುಲೈ 11ರಂದು ಮಧ್ಯಾಹ್ನ ಸಮಯದಲ್ಲಿ ಸಕಲೇಶಪುರ ಆರ್‌ಟಿಓ ಕಚೇರಿಯಲ್ಲಿ ಬ್ರೋಕರ್ ಮೋಹನ್ ಶೆಟ್ಟಿ ಎಂಬುವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಆಗ ಈ ಮೂವರು ಅಧಿಕಾರಿಗಳು ಭಾಗವಹಿಸಿದ್ದರು.