ಬಾಳೆಹೊನ್ನೂರು: ಅಕ್ರಮವಾಗಿ ರಸಗೊಬ್ಬರವನ್ನು ಲಾರಿಗೆ ಲೋಡ್ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 300 ಮೂಟೆ ಯೂರಿಯಾ ರಸಗೊಬ್ಬರವನ್ನು ವಶಪಡಿಸಿಕೊಂಡಿರುವ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೇವಗೋಡು ಸುಭಾಸ್ ನಗರದ ವಿರ್ಲ್ಪೆರ್ಡ್ (40) ಯಾವುದೇ ಅನುಮತಿ ಇಲ್ಲದೆ ತನ್ನ ಮನೆಯಲ್ಲಿ ಅಕ್ರಮವಾಗಿ ಯೂರಿಯಾ ರಸಗೊಬ್ಬರವನ್ನು ಇಟ್ಟುಕೊಂಡು ಲಾರಿಗೆ ಲೋಡ್ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯ ಪಿಎಸ್ ಐ ರವೀಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಲಾರಿಯಲ್ಲಿದ್ದ 220 ಮೂಟೆ ಮತ್ತು ಮನೆಯಲ್ಲಿದ್ದ 80 ಮೂಟೆ ಒಟ್ಟು 300 ಮೂಟೆ ಯೂರಿಯಾ ರಸಗೊಬ್ಬರವನ್ನು ಕೃಷಿ ಅಧಿಕಾರಿಗಳ ಸಮ್ಮುಖದಲ್ಲಿ ವಶಕ್ಕೆ ಪಡೆದಿದ್ದಾರೆ.
